ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ- ಉಡುಪಿ ಜಿಲ್ಲೆ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಉಡುಪಿ ಜಿಲ್ಲೆ 93.90 ಶೇ ಪಡೆದು ಪ್ರಥಮ ಸ್ಥಾನ ಗಳಿಸಿಕೊಂಡರೆ, 93.57 ಶೇ ಫಲಿತಾಂಶದೊಂದಿಗೆ ದ.ಕ 2ನೇ ಸ್ಥಾನ ಪಡೆದುಕೊಂಡಿದೆ. 48.45% ಫಲಿತಾಂಶ ಪಡೆದು ಯಾದಗಿರಿ ಜಿಲ್ಲೆ ಕೊನೆಯ ಸ್ಥಾನಗಳಿಸಿದೆ.

ಇಲಾಖೆಯ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಫಲಿತಾಂಶವನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ಫಲಿತಾಂಶವು ಮಧ್ಯಾಹ್ನ 1.30 ರ ನಂತರ ಇಲಾಖೆಯ ಅಧಿಕೃತ ಜಾಲತಾಣವಾದ  karresults.nic.in & kseab.karnataka.gov.in ತಮ್ಮ ಅಂಕಪಟ್ಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಹುದಾಗಿದೆ.

ಈ ಬಾರಿಯ ಫಲಿತಾಂಶದಲ್ಲಿಯೂ ಸಹ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ರಾಜ್ಯದ ಜಿಲ್ಲೆಗಳ ಪೈಕಿ ಉಡುಪಿ ಜಿಲ್ಲೆಯು ಅತ್ಯುತ್ತಮ ಸಾಧನೆ ತೋರಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯು ದ್ವಿತೀಯ ಸ್ಥಾನವನ್ನು ಗಳಿಸಿದೆ.































 
 

ಜಿಲ್ಲೆಗಳ ಶೇಕಡಾವಾರು ಉತ್ತೀರ್ಣ ಫಲಿತಾಂಶ:

ಮೊದಲ ಸ್ಥಾನ ಉಡುಪಿ ಜಿಲ್ಲೆ ; 93.90, ಎರಡನೇ ಸ್ಥಾನ ದಕ್ಷಿಣ ಕನ್ನಡ ಜಿಲ್ಲೆ: 93.57, ಮೂರನೇ ಸ್ಥಾನ ಬೆಂಗಳೂರು ದಕ್ಷಿಣ ; 85.36, ನಾಲ್ಕನೇ ಸ್ಥಾನ ಕೊಡಗು; 83.84, ಐದನೇ ಸ್ಥಾನ ಬೆಂಗಳೂರು ಉತ್ತರ; 83.31, ಆರನೇ ಸ್ಥಾನ ಉತ್ತರ ಕನ್ನಡ ; 82.93, ಏಳನೇ ಸ್ಥಾನ ಶಿವಮೊಗ್ಗ ; 79.91, ಎಂಟನೇ ಸ್ಥಾನ ಬೆಂಗಳೂರು ಗ್ರಾಮಾಂತರ ; 79.70, ಒಂಭತ್ತನೇ ಸ್ಥಾನ ಚಿಕ್ಕಮಗಳೂರು; 79.56, ಹತ್ತನೇ ಸ್ಥಾನ ಹಾಸನ; 77.56, ಕೊನೆ ಸ್ಥಾನ ಯಾದಗಿರಿ ; 48.45 ಪಡೆದುಕೊಂಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top