ಸಹಕಾರಿ ಚುನಾವಣೆಗಳಲ್ಲಿ ವಿಜೇತರಿಗೆ ಅಭಿನಂದನೆ ಹಾಗೂ ಸಹಕಾರಿ ಸಮಾವೇಶ | ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭ್ಯುದಯಕ್ಕೂ ಸಹಕಾರಿ ಕ್ಷೇತ್ರದ ಕೊಡುಗೆ ಸಿಗಲಿದೆ : ಕ್ಯಾ.ಬ್ರಿಜೇಶ್‍ ಚೌಟ

ಪುತ್ತೂರು: ಪ್ರಧಾನಿ ನರೇಂದ್ರ ಮೋದಿಯವರು ಸಹಕಾರಿ ಕ್ಷೇತ್ರವನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದಾರೆ. ಈ ಕಾರಣದಿಂದ ಕೇಂದ್ರದಲ್ಲಿ ಇತ್ತೀಚೆಗೆ ಪ್ರತ್ಯೇಕ ಸಹಕಾರಿ ಸಚಿವಾಲಯವನ್ನೇ ಮಾಡಲಾಗಿದೆ. ಸಹಕಾರಿ ವಿಶ್ವವಿದ್ಯಾನಿಲಯ ಆರಂಭಿಸುವ ಬಿಲ್ ಕೂಡ ಸಂಸತ್ತಿನಲ್ಲಿ ಪಾಸ್ ಆಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಅಭ್ಯುದಯಕ್ಕೂ ಸಹಕಾರಿ ಕ್ಷೇತ್ರದ ಕೊಡುಗೆ ಸಿಗಲಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.

ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಮಂಗಳವಾರ ನಗರದ ಕೋಟೆಚಾ ಸಭಾಭವನದಲ್ಲಿ ಆಯೋಜಿಸಲಾದ ಸಹಕಾರಿ ಚುನಾವಣೆಗಳಲ್ಲಿ ವಿಜೇತರಿಗೆ ಅಭಿನಂದನೆ ಹಾಗೂ ಸಹಕಾರಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸಹಕಾರಿ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಹಜ. ಬಿಜೆಪಿ ಕೇಂದ್ರ ಸರಕಾರದ ಕೃಷಿ, ಸಹಕಾರ ಕ್ಷೇತ್ರಕ್ಕೆ ನೀಡುತ್ತಿರುವ ಬೆಂಬಲದ ವಿಚಾರಗಳು ಮನೆ ಮನೆ ತಲುಪಿದ ಕಾರಣ ಅಪೂರ್ವ ಗೆಲುವು ಸಾಧ್ಯವಾಗಿದೆ. ಸಹಕಾರಿ ಕ್ಷೇತ್ರದ ಮೂಲಕ ರಾಷ್ಟ್ರದ ಅಭಿವೃದ್ಧಿ ಹೇಗೆ ಮಾಡಬಹುದು ದ.ಕ. ಜಿಲ್ಲೆ ಉತ್ತಮ ಉದಾಹರಣೆಯಾಗಿದೆ ಎಂದರು.
ಸ್ವಾತಂತ್ರö್ಯ ಪೂರ್ವದಲ್ಲೇ ೧೯೦೬ ರಲ್ಲಿ ಜಿಲ್ಲೆಯಲ್ಲಿ ರಾಷ್ಟೀಕೃತ ಬ್ಯಾಂಕ್‌ಗಳ ಆರಂಭಗೊAಡಿದೆ. ಸಹಕಾರ ಎಂಬುದು ಇಲ್ಲಿನ ಜನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಸಮಾಜದ ವಿಷಯ ಬಂದಾಗ ಸಮಷ್ಟಿ ಭಾವದ ಕೆಲಸವನ್ನು ಇಲ್ಲಿನ ಜನತೆಯಲ್ಲಿ ಕಾಣಬಹುದು.  ಸಹಕಾರ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ ಕ್ಷೇತ್ರ ದ.ಕ. ಜಿಲ್ಲೆ ಎಂದು ಹೇಳಿದರು.
ದೇಶದಲ್ಲಿ 2 ಲಕ್ಷ ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರಿ ಸೊಸೈಟಿಗಳನ್ನು ಆರಂಭಿಸುವ ಉದ್ದೇಶ ಸರಕಾರ ಹೊಂದಿದೆ. ೨೫ ಕ್ಕೂ ಹೆಚ್ಚು ಆರ್ಥಿಕ ಚಟುವಟಿಕೆ ಆ ಮೂಲಕ ಆಗಲಿದೆ. ಈಗಾಗಲೇ ೪೫ ಸಾವಿರ ಸೊಸೈಟಿಗಳು ಡಿಜಿಟಲ್ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿವೆ. 92 ಮಲ್ಟಿ ಕೋ ಆಪರೇಟಿವ್ ಸೊಸೈಟಿ ಆರಂಭಿಸಿದೆ, ಆರ್ಬನ್ ಕೋ ಆಪರೇಟಿವ್ ಬ್ಯಾಂಕ್, ಕೋ ಆಪರೇಟಿವ್ ಬ್ಯಾಂಕ್‌ಗಳಲ್ಲಿ ಲೋನ್ ಲಿಮಿಟ್ ಹೆಚ್ಚಳ, ಟೆಕ್ನಾಲಜಿ ಉಪಯೋಗಿಸಿಕೊಂಡು ಅಭಿವೃದ್ಧಿ, ಸಾವಯವ ಉತ್ತೇಜನ, ಕೋ ಆಪರೇಟಿವ್ ಉದ್ಯೋಗಿಗಳಿಗೆ ತರಬೇತಿ ಕೊರ್ಸುಗಳು ಮೊದಲಾದವುಗಳನ್ನು ಸರಕಾರ ಮಾಡುತ್ತಿದೆ. ಸಹಕಾರಿ ಕ್ಷೇತ್ರ ನಿಜವಾಗಿ ಸಮಾಜದಲ್ಲಿ ಬದಲಾವಣೆ ಮಾಡುವ ಸಾಮರ್ಥ್ಯದ ಕ್ಷೇತ್ರ ಎಂಬುದನ್ನು ಅರಿತುಕೊಂಡು ಕೇಂದ್ರ ಸರಕಾರ ಪೂರಕ ಉತ್ತೇಜನ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.































 
 

ಕರಾವಳಿಯ ಜಿಲ್ಲೆಗಳಲ್ಲಿ ಅಡಿಕೆಗೆ ಬಾಧಿಸುತ್ತಿರುವ ರೋಗಗಳ ಕುರಿತಂತೆ ಈ ಭಾಗದ 10 ಸಂಸದರು ಸೇರಿ ಪೂರಕ ಕ್ರಮಕ್ಕೆ ಸರಕಾರಕ್ಕೆ ಮನವಿ ಮಾಡಿದ್ದೇವೆ. ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತಿದ್ದು, ಇದಕ್ಕೆ ನಾವು ಬದ್ದರಿದ್ದೇವೆ. ಮತ್ತೊಂದೆಡೆ ಬದಲಾವಣೆ ಜಗದ ನಿಯಮ ಎನ್ನುವಂತೆ ಅಡಿಕೆಗೆ ಪರ್ಯಾಯ ಬೆಳೆಗಳ ಬಗ್ಗೆಯೂ ಗಂಭೀರ ಯೋಚನೆ ಆಗಬೇಕು. ಮಣ್ಣು ಪರೀಕ್ಷೆ ಮೂಲಕ ಕಾಫಿ ಬೆಳೆ ಈ ಭಾಗಕ್ಕೆ ಸೂಕ್ತವಾಗಿದೆ ಎಂಬುದೂ ಸಾಭೀತಾಗಿದೆ. ಸಮಸ್ಯೆ ಇರುವಲ್ಲಿ ಕಾಫಿ ಬೆಳೆ  ಉತ್ತೇಜನಕ್ಕೆ ನಾವು ಮಾಡಿದ ಮನವಿಗೆ ಕಾಫಿ ಬೋರ್ಡ್, ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ. ಕೃಷಿಕರು ದೂರಗಾಮಿ ಯೋಚನೆ ಮಾಡಬೇಕು. ಸರಕಾರವು ಅವರನ್ನು ಬೆಂಬಲಿಸಲು ಸಿದ್ಧವಿದೆ ಎಂದು ಸಂಸದರು ಭರವಸೆ ನೀಡಿದರು.

ರಾಜ್ಯ ಸರಕಾರದ ವಿರುದ್ಧ ಹೋರಾಟಕ್ಕೆ ಬೆಂಬಲಿಸಿ
ರಾಜ್ಯ ಸರಕಾರದ ವಿರುದ್ಧ ಎ.9 ರಂದು ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಳ್ಳಬೇಕು. ಮಂಗಳೂರಿನಲ್ಲಿ ಹೋರಾಟಕ್ಕೆ ಹುರುಪು ನೀಡಿ ಸಿದ್ದರಾಮಯ್ಯಗೆ ಬಿಸಿ ಮುಟ್ಟಿಸುವ ಕೆಲಸ ಆಗಬೇಕು. ದ.ಕ. ಜಿಲ್ಲೆಯವರು ಮೂರ್ಖರಲ್ಲ ಎಂದು ತೋರಿಸಬೇಕಿದೆ ಎಂದು ಚೌಟ ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು ಮಾತನಾಡಿ, ಇಂದು ಅತ್ಯಂತ ವೃತ್ತಿಪರ ಮತ್ತು ಯಶಸ್ವಿ ಸಹಕಾರಿ ಸಂಘಗಳು ಕಾರ್ಯಾಚರಿಸುತ್ತಿರುವುದು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಎನ್ನುವುದು ಹೆಮ್ಮೆಯ ವಿಚಾರ. ರಾಜ್ಯ ಸರಕಾರಗಳ ನಿರ್ಲಕ್ಷದ ಫಲವಾಗಿ ಸಹಕಾರಿ ಕ್ಷೇತ್ರ ನಿರೀಕ್ಷಿತ ಮಟ್ಟದಲ್ಲಿ ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡಲಾಗದಿರುವ ಅಂಶವನ್ನು ಮನಗಂಡ ನಮ್ಮ ಕೇಂದ್ರ ಸರಕಾರವು ವೃತ್ತಿಪರತೆಯನ್ನು ತುಂಬಲು ಇದೀಗ ಕೌಶಲ್ಯ ತರಬೇತಿ ಮತ್ತು ಕಂಪ್ಯೂಟರಿಕರಣ ಮಾಡುವ ಸದುದ್ದೇಶದಿಂದ ಕ್ರಾಂತಿಕಾರಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಪಕ್ಷದ ಸಹಕಾರಿ ಪ್ರಕೋಷ್ಠವು ಸಹಕಾರ ಭಾರತಿ ಸಂಘಟನೆಯೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕಾಗಿದೆ ಎಂದರು.
ಗುಜರಾತ್‌ನ ಆನಂದ್, ಪುತ್ತೂರಿನ ಕ್ಯಾಂಪ್ಕೋದಂತಹ ಯಶಸ್ವಿ ಸಹಕಾರಿ ಸಂಸ್ಥೆಗಳ ಆಡಳಿತ ನಿರ್ವಹಣೆಯ ತತ್ವಗಳನ್ನು ನಮ್ಮ ಸಹಕಾರಿ ಕ್ಷೇತ್ರದ ಮುಖಂಡರು ಅಧ್ಯಯನ ನಡೆಸಬೇಕಾಗಿದೆ. ಸಹಕಾರಿ ಸಂಸ್ಥೆಗಳನ್ನು ಅತ್ಯುನ್ನತ ರೀತಿಯಲ್ಲಿ ನಿರ್ವಹಣೆ ಮಾಡಲು ವೃತ್ತಿ ಕೌಶಲ್ಯದ ಅಗತ್ಯವಿದ್ದು, ಸೂಕ್ತ ತರಬೇತಿ ನೀಡಲು ರಾಜ್ಯ ಸಹಕಾರಿ ಸಚಿವರನ್ನು ಭೇಟಿ ಮಾಡಿ ಬೇಡಿಕೆಯನ್ನು ಮುಂದಿಡುವ ನಿರ್ಧಾರ ಕೈಗೊಂಡಿದ್ದೇನೆ. ಪ್ರಸ್ತುತ ಸಹಕಾರಿ ಕ್ಷೇತ್ರದಲ್ಲಿ ಕೆಲವು ಕಾನೂನು ತೊಡಕುಗಳನ್ನು ಗುರುತಿಸಿದ್ದೇನೆ. ಅವುಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಕಿಶೋರ್ ಪುತ್ತೂರು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲಾ ಉಪಾಧ್ಯಕ್ಷ ಹಾಗೂ ಪುತ್ತೂರು ಪ್ರಭಾರಿ ಸುನಿಲ್ ಆಳ್ವ, ಜಿಲ್ಲಾ ಉಪಾಧ್ಯಕ್ಷ ಪ್ರಶಾಂತ್ ಮಾರ್ತಾ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಬಿಜೆಒಇ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ನಂದನ್ ಮಲ್ಯ, ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣ ನಾಯ್ಕ್, ರಾಜ್ಯ ಒಬಿಸಿ ಮೊರ್ಚಾ ಕಾರ್ಯದರ್ಶಿ ಆರ್.ಸಿ.ನಾರಾಯಣ, ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಹರೀಶ್ ಬೀಜತ್ರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಚುನಾವಣೆಯಲ್ಲಿ ಗೆಲುವು ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾದವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಉಮೇಶ್ ಕೊಡಿಬೈಲ್ ಸ್ವಾಗತಿಸಿ, ನಗರ ಮಂಡಲ ಅಧ್ಯಕ್ಷ  ಶಿವಕುಮಾರ್ ವಂದಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top