ಕಾಣಿಯೂರು : ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಉಡುಪಿ ಕಾಣಿಯೂರು ಮಠ ಇವರ ಆಶೀರ್ವಾದದೊಂದಿಗೆ ಏ.22 ಮಂಗಳವಾರದಿಂದ ಏ.23 ಬುಧವಾರದವರೆಗೆ ಬೆಳಗ್ಗೆ ವೃಷಭ ಲಗ್ನದಲ್ಲಿ ಅಶ್ವತ್ಥ ಉಪನಯನ ಹಾಗೂ ವಿವಾಹ ಸಮಾರಂಭ ನಡೆಯಲಿದೆ.
ವೇದಮೂರ್ತಿ ಶ್ರೀ ಸುಬ್ರಹ್ಮಣ್ಯ ಉಪಾಧ್ಯಾಯ ರವರ ಮಾರ್ಗದರ್ಶನದಲ್ಲಿ ಅಶ್ವತ್ಥ ಉಪನಯನ ಹಾಗೂ ವಿವಾಹ ಸಮಾರಂಭ ನೆರವೇರಲಿದೆ.
ಈ ಸಮಾರಂಭಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಆಡಳಿತ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.