ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯದ ಕೆಮ್ಮಿಂಜೆ ಒಕ್ಕೂಟದ ಕೊರಗಜ್ಜ ಸ್ವಸಹಾಯ ಸಂಘದ ಸದಸ್ಯರಾದ ಲಲಿತರವರು ಟೋಟಲ್ ಸಂಘದಿಂದ 4 ಲಕ್ಷ ಸಾಲವನ್ನು ಪಡೆದಿದ್ದು . 3ಲಕ್ಷ ,82 ಸಾವಿರ ಸಾಲದ ಮೊತ್ತ ಬಾಕಿ ಇದ್ದು. ಇವರ ಸಾಲವನ್ನು ಮನ್ನ ಮಾಡಲಾಗಿದೆ.
ಇದರ ಮಂಜೂರಾತಿ ಪತ್ರವನ್ನು ಕೆಮ್ಮಿಂಜೆ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ರಾಮಶೆಟ್ಟಿ ಹಾಗೂ ಸಮಿತಿಯ ಕಾರ್ಯದರ್ಶಿಯಾವರಾದ ಶೇಖರ್ ಆಚಾರ್ಯ. ಹಾಗೂ ಒಕ್ಕೂಟದ ಅಧ್ಯಕ್ಷರಾದ ಚೇತನ್ ಇವರು ಲಲಿತ ಇವರಿಗೆ ಮಂಜೂರಾತಿ ಪತ್ರವನ್ನು ವಿತರಿಸಿದರು .
ಈ ಸಂದರ್ಭದಲ್ಲಿ ಇವರ ಪತಿ ಆನಂದ ಇವರು ಅನಾರೋಗ್ಯದಿಂದ ಮರಣ ಹೊಂದಿದ್ದು. ಇವರಿಗೆ ಸಾಲವನ್ನು ಕಟ್ಟಲು ಕಷ್ಟ ಸಾಧ್ಯವಾಗಿತ್ತು. ಹಾಗಾಗಿ ಸಾಲಗಳಿಗೆ ಪಿ ಆರ್ ಕೆ ಮೊತ್ತ ದಡಿಯಲ್ಲಿ ಪಿ ಆರ್ ಕೆ ಮೊತ್ತವನ್ನು ಸಾಲಗಾರರು ಮತ್ತು ವಿನಿಯೋಗದಾರರಿಗೆ ಪಾವತಿಸಿದ್ದು. 3, ಲಕ್ಷ 82 ಸಾವಿರ ರೂಪಾಯಿ ಮೊತ್ತವನ್ನು ಮನ್ನಾ ಮಾಡಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು, ದಾಖಲಾತಿ ಸಮಿತಿ ಸದಸ್ಯರು, ಒಕ್ಕೂಟದಲ್ಲಿ 26 ಸಂಘದ ಸದಸ್ಯರು, ವಲಯದ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.