ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಯಕ್ಷ ಕಲಾಕೇಂದ್ರ ಹಾಗೂ ಲಲಿತಕಲಾ ಸಂಘದ ಆಶ್ರಯದಲ್ಲಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಐಕ್ಯೂಎಸಿ ಸಂಯೋಜಕಿ, ವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಮಾಲಿನಿ ಕೆ. ‘ರಂಗಭೂಮಿಯಲ್ಲಿ ಸೃಜನಶೀಲತೆ’ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ, ರಂಗಭೂಮಿಯು ನಿರಂತರತೆಯನ್ನು ಹೊಂದಿ ಹೊಸ ಸ್ವರೂಪಗಳಿಗೆ ತೆರೆದಿರಬೇಕಾದ ಅಗತ್ಯತೆಯ ಬಗ್ಗೆ ತಿಳಿಸುತ್ತಾ, ರಂಗಭೂಮಿಯ ಪ್ರಸ್ತುತಿಯನ್ನು ಅನುಭವಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಂಸ್ಥೆಯ ಪ್ರಾಂಶುಪಾಲ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕಲೆ ಎಂಬುದು ದೇವರ ಪ್ರಸಾದ. ಅದನ್ನು ಬೆಳೆಸಿ ಪೋಷಿಸುವುದೇ ನಾವು ದೇವರಿಗೆ ಅರ್ಪಿಸುವ ನಿಜವಾದ ಪೂಜೆ. ವಿದ್ಯಾರ್ಥಿಗಳು ವಿವಿಧ ಕಲಾಪ್ರಕಾರಗಳಲ್ಲಿ ಕ್ರಿಯಾತ್ಮಕವಾಗಿ, ಸೃಜನಾತ್ಮಕವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು.
ಯಕ್ಷ ಕಲಾಕೇಂದ್ರದ ಸಂಯೋಜಕ, ವ್ಯವಹಾರ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ಸುರಭಿ, ಮಾನಸ ಪ್ರಾರ್ಥಿಸಿದರು. ಯಕ್ಷಾಮೃತದ ಸಂಯೋಜಕಿ ಸುರಕ್ಷಾ ರೈ ವಂದಿಸಿದರು. ಉಪನ್ಯಾಸಕರಾದ ಡಾ. ಮೈತ್ರಿ ಭಟ್, ವಿನಿಲ್ರೋ ಹನಿ ಡಿ’ಸೋಜಾ ಉಪಸ್ಥಿತರಿದ್ದರು.