ಪುತ್ತೂರು ಅಕ್ಷಯ ಕಾಲೇಜಿನಲ್ಲಿ “WORKPLACE ETHIQUETTE”  ಕಾರ್ಯಾಗಾರ

ಪುತ್ತೂರು : ಅಕ್ಷಯ ಕಾಲೇಜಿನಲ್ಲಿ  ವಾಣಿಜ್ಯ ವಿಭಾಗ ದ ಇನ್ವಿಕ್ತಾ  ಕಾಮರ್ಸ್ ಅಸೋಸಿಯೇಷನ್ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ  ಸಹಭಾಗಿತ್ವದಲ್ಲಿ “WORKPLACE ETHIQUETTE”  ಕಾರ್ಯಾಗಾರ ನಡೆಯಿತು.

ಈ ಸಂದರ್ಭದಲ್ಲಿ ಕೆಲಸ   ಸ್ಥಳದ  ಶಿಷ್ಟಾಚಾರ ಎಂಬ ವಿಷಯದಲ್ಲಿ ಕಾರ್ಯಾಗಾರದ   ಸಂಪನ್ಮೂಲ ವ್ಯಕ್ತಿಯಾಗಿ  ಕುಮಾರಿ  ಅಕ್ಷತ ಕೆ  ಹಣಕಾಸು ವಿಶ್ಲೇಷಕರು ನೋವಿಗೋ  ಐ. ಟಿ  ಸಂಸ್ಥೆ ಮಂಗಳೂರು  ಇವರು  ಭಾಗವಹಿಸಿದರು. 

 ಕೆಲಸ   ಸ್ಥಳದ  ಶಿಷ್ಟಾಚಾರವು ಒಂದು ನಿರ್ದಿಷ್ಟ ವ್ಯವಹಾರದಲ್ಲಿ ಉದ್ಯೋಗಿಗಳಿಂದ ನಿರೀಕ್ಷಿಸಲಾಗುವ ಮಾತು ಮತ್ತು ನಡವಳಿಕೆಯಾಗಿದೆ.  ಉದ್ಯೋಗಿಗಳು ,ಮಾಲೀಕರು  ಮತ್ತು ಗ್ರಾಹಕರ ಮಧ್ಯೆ ಉತ್ತಮ  ಬಾಂಧವ್ಯ  ಅತೀ  ಅಗತ್ಯ.  ವಿಭಿನ್ನ ಸಂಸ್ಥೆಗಳಲ್ಲಿ  ಸಂಸ್ಥೆಗಳ ಸ್ವರೂಪ ಮತ್ತು  ಕಾರ್ಯ ಕ್ಷೇತ್ರದ  ವ್ಯಾಪ್ತಿಯಲ್ಲಿ ಹೊಂದಾಣಿಕೆಗಳು ಬದಲಾಗಬಹುದಾದರೂ, ಹೆಚ್ಚಿನ ಕೆಲಸದ ಸ್ಥಳದ ಶಿಷ್ಟಾಚಾರ ಹಲವು ಮಾನದಂಡಗಳನ್ನು ಒಳಗೊಂಡಿವೆ. ಉದ್ಯೋಗಿಗಳು ತಮ್ಮ  ಕರ್ತವ್ಯದ  ಸಮಯದಲ್ಲಿ ಏನು ಧರಿಸಬೇಕು (ಡ್ರೆಸ್ ಕೋಡ್), ನಾಯಕರು, ಗ್ರಾಹಕರು ಮತ್ತು ಸಹೋದ್ಯೋಗಿಗಳೊಂದಿಗೆ ಹೇಗೆ ಸಂವಹನ ನಡೆಸಬೇಕು, ಕೆಲಸಕ್ಕೆ ಯಾವಾಗ ಬರಬೇಕು ಮತ್ತು ಹೊರಡಬೇಕು ಸಮಯದ  ಪರಿಪಾಲನೆ , ವೃತ್ತಿಪರ ನಡವಳಿಕೆಗೆ ಸಂಬಂಧಿಸಿದ ಇತರ ನಿಯಮಗಳನ್ನು  ಸಾಮಾನ್ಯವಾಗಿ  ಎಲ್ಲಾ ಸಂಸ್ಥೆಗಳು  ಅನುಸರಿಸುತ್ತಿದೆ.  ವಿದ್ಯಾರ್ಥಿಗಳು  ಮುಂದಿನ  ವ್ಯವಹಾರ  ಕ್ಷೇತ್ರಗಳಲ್ಲಿ ಕೆಲಸದ ಸ್ಥಳದ ಶಿಷ್ಟಾಚಾರ ಗಳನ್ನು  ಸಮರ್ಪಕವಾಗಿ  ನಿರ್ವಹಣೆ ಮಾಡಬೇಕು  ಎಂದು  ವಿದ್ಯಾರ್ಥಿಗಳಿಗೆ  ಮಾಹಿತಿ ನೀಡಿದರು.

































 
 

ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಸಂಪತ್ ಕೆ ಪಕ್ಕಳ ರವರು  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ  ಮುಂದಿನ  ಉದ್ಯೋಗ  ಕ್ಷೇತ್ರಗಳಲ್ಲಿ   ವಿಪುಲವಾದ  ಅವಕಾಶಗಳು ತಮ್ಮ ಕರ್ತವ್ಯ ಮತ್ತು  ವ್ಯವಹಾರದ  ಶಿಷ್ಟಾಚಾರ ಗಳನ್ನು  ಒಳಗೊಂಡಿದೆ.  ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು  ಶಿಸ್ತು, ಸಮಯ ಪ್ರಜ್ಞೆ ಹಾಗೂ  ಕರ್ತವ್ಯ ಪ್ರಜ್ಞೆಯನ್ನು ಮೈಗೂಡಿಸಿಗೊಳ್ಳಬೇಕು  ಎಂದು ಸಲಹೆ ನೀಡಿದರು. 

ಇನ್ವಿಕ್ತ ಕಾಮರ್ಸ್ ಅಸೋಸಿಯೇಷನ್ ಸಂಯೋಜಕರಾದ  ಮೇಘಶ್ರೀ  ಪ್ರಾಸ್ತಾವಿಕವಾಗಿ ಮಾತನಾಡಿದರು.  ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ ಎ ,  ಉಪಪ್ರಾಂಶುಪಾಲರಾದ ರಕ್ಷಣ್  ಟಿ ಆರ್ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಕಿಶೋರ್ ಕುಮಾರ್ ರೈ ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಟೀನಾ ಸ್ವಾಗತಿಸಿ, ಅಂಜಲಿ ವಂದಿಸಿ, ಸವಿ ದೇಚಮ್ಮ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top