ಮಧೂರು : ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ಮಧೂರು ಅಷ್ಟ ಬಂಧ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಯಕ್ಷ ಭಾರತಿ ರಿ. ಬೆಳ್ತಂಗಡಿ ತಂಡದಿಂದ ಮದವೂರ ವಿಘ್ನೇಶ ವೇದಿಕೆಯಲ್ಲಿ ದೇವ ದರ್ಶನ ತಾಳಮದ್ದಳೆ ಜರಗಿತು.
ಭಾಗವತರಾಗಿ ನಾರಾಯಣ ಶರ್ಮ ಕಾಟುಕುಕ್ಕೆ,ಹಿಮ್ಮೇಳದಲ್ಲಿ ಲಕ್ಷ್ಮೀಶ ಬೆಂಗರೋಡಿ, ರಾಜೇಂದ್ರ ಪ್ರಸಾದ್ ಪುಂಡಿಕಾಯಿ, ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ , ಅರ್ಥದಾರಿಗಳಾಗಿ ವಾಸುದೇವ ರಂಗಾಭಟ್ ಮಧೂರು (ಬಲರಾಮ ), ಗುರುರಾಜ ಹೊಳ್ಳ ಬಾಯಾರು (ನಾರದ ), ದಿವಾಕರ ಆಚಾರ್ಯ ಗೇರುಕಟ್ಟೆ (ಶ್ರೀ ಕೃಷ್ಣ ), ಶಶಿಧರ ಕನ್ಯಾಡಿ ( ಜಾಂಬವತಿ ), ಸುರೇಶ ಕುದ್ರಂತ್ತಾಯ ಉಜಿರೆ ( ಜಾಂಬವ) ಭಾಗವಹಿಸಿದ್ದರು.
ಸಾಂಸ್ಕೃತಿಕ ಸಮಿತಿಯಿಂದ ನೀಡಲಾದ ಸ್ಮರಣಿಕೆ ಮತ್ತು ಪ್ರಸಾದವನ್ನು ತಾಳಮದ್ದಳೆಯ ಸಂಯೋಜಕರಾದ ಶಶಿಧರ ಕನ್ಯಾಡಿ ಯಕ್ಷಭಾರತಿ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ, ಟ್ರಸ್ಟಿ ಸುರೇಶ್ ಕುದ್ರೆನ್ತಾಯ ಸ್ವೀಕರಿಸಿದರು. ಗುರುರಾಜ ಹೊಳ್ಳ ಬಾಯಾರು ಕಾರ್ಯಕ್ರಮ ನಿರೂಪಿಸಿದರು.