ಕುರಿಯ ಮಲಾರ್ ನಿವಾಸಿ ಮೋಹನ್‍ ಆತ್ಮಹತ್ಯೆ

ಪುತ್ತೂರು: ಕುರಿಯ ಗ್ರಾಮದ ಮಲಾರ್ ನಿವಾಸಿ, ಕಲ್ಲರ್ಪೆ ಚಿನ್ನು‌ ಹೋಟೆಲ್ ಮಾಲಕ ಮೋಹನ್ (38 ವ.) ಅವರು ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ತಿಳಿದು ಬಂದಿದೆ.

ಮಲಾರಿನ ತನ್ನ ಮನೆಯ ಒಳಗಡೆಯೇ ನೇಣು‌ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂದರ್ಭ ಡೆತ್ ನೋಟ್‍ ಲಭಿಸಿದ್ದು, ಡೆತ್ ನೋಟ್’ನಲ್ಲಿ, ಸಾಲಬಾಧೆಯೇ ತನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದಾರೆ.

ನೆರೆಯ ಮನೆಯಲ್ಲಿ ಕಾರ್ಯಕ್ರಮಕ್ಕೆಂದು ಮನೆಯವರು ಹೋಗಿದ್ದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನ;ಲಾಗಿದೆ. ಮೃತರು ತಾಯಿ, ಪತ್ನಿ ಹಾಗೂ 4 ವರ್ಷದ ಮಗುವನ್ನು ಅಗಲಿದ್ದಾರೆ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top