ನವದೆಹಲಿ: ನಿನ್ನೆ ಚಂದ್ರ ದರ್ಶನವಾಗಿರುವ ಹಿನ್ನೆಲೆಯಲ್ಲಿ ಮಾರ್ಚ್ 31ರಂದು ಭಾರತದಲ್ಲಿ ಈದ್-ಉಲ್-ಫಿತರ್ ಆಚರಿಸಲಾಗುವುದು. ರಮ್ಜಾನ್ ಉಪವಾಸ ಮಾಸದ ಮುಕ್ತಾಯವನ್ನು ಸೂಚಿಸುವ ಈದ್-ಉಲ್-ಫಿತರ್ ಇಂದು ಸಂಜೆ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಸೋಮವಾರ ದೇಶದಲ್ಲಿ ಆಚರಿಸಲಾಗುವುದು. ಭಾರತದಲ್ಲಿ ರಮ್ಜಾನ್ ಉಪವಾಸ ವ್ರತ ಮಾರ್ಚ್ 2 ರಂದು ಪ್ರಾರಂಭವಾಗಿದ್ದು, ಸೋಮವಾರ ಅಂತ್ಯವಾಗಲಿದೆ.
ಫತೇಪುರಿ ಮಸೀದಿ ಇಮಾಮ್ ಮುಫ್ತಿ ಮುಕರ್ರಮ್ ಅಹ್ಮದ್ ತಿಳಿಸಿದಂತೆ, ಮಸೀದಿಯ ರೂಟ್-ಎ-ಹಿಲಾಲ್ ಸಮಿತಿ ಅನೇಕ ಸ್ಥಳಗಳನ್ನು ಸಂಪರ್ಕಿಸಿದೆ. ಅಲ್ಲಿನ ಹಲವಾರು ಸ್ಥಳಗಳಲ್ಲಿ ಅರ್ಧ ಚಂದ್ರ ದರ್ಶನವಾಗಿದೆ. ಹೀಗಾಗಿ ಸೋಮವಾರ ದೇಶದಲ್ಲಿ ಈದ್ ಆಚರಿಸಲಾಗುವುದು.
ಈದ್-ಉಲ್-ಫಿತರ್ ಪ್ರಪಂಚದಾದ್ಯಂತ ವಿವಿಧ ದಿನಗಳಲ್ಲಿ ಆಚರಿಸಲಾಗುತ್ತದೆ. ಇದು ಚಂದ್ರನ ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಶವ್ವಾಲ್ ತಿಂಗಳ ಆರಂಭವನ್ನು ಸೂಚಿಸುವ ಅರ್ಧಚಂದ್ರನ ದರ್ಶನದಿಂದ ನಿರ್ಧರಿಸಲ್ಪಡುತ್ತದೆ.
ಉಪವಾಸ ವ್ರತ ಮುರಿಯುವ ಹಬ್ಬ ಎಂದೂ ಕರೆಯಲ್ಪಡುವ ಈದ್-ಉಲ್-ಫಿತರ್ ಆಧ್ಯಾತ್ಮಿಕ ಚಿಂತನೆ, ಔದಾರ್ಯ ಮತ್ತು ಕೋಮು ಸಾಮರಸ್ಯದ ಸಮಯವಾಗಿದೆ. ವಿಶೇಷ ಈದ್ ಪ್ರಾರ್ಥನೆಯೊಂದಿಗೆ ಈ ದಿನ ಪ್ರಾರಂಭವಾಗುತ್ತದೆ, ಅಲ್ಲಿ ಕುಟುಂಬಗಳು ಮತ್ತು ಸ್ನೇಹಿತರು ಒಟ್ಟುಗೂಡುತ್ತಾರೆ. ದಾನ ಅಥವಾ ಜಕಾತ್ ಈ ಈದ್-ಉಲ್-ಫಿತರ್ ಆಚರಣೆಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.