ಪುತ್ತೂರು : ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘ ಉಪ್ಪಿನಂಗಡಿ ಇದರ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ಕಂಬಳದಡ್ಡ – ಬೆಳ್ಳಿಪ್ಪಾಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯೌವ್ವನಾಶ್ವ ಕಾಳಗ ತಾಳಮದ್ದಳೆ ಜರಗಿತು.
ಭಾಗವತರಾಗಿ ಪದ್ಮನಾಭ ಕುಲಾಲ್, ಸುರೇಶ್ ರಾವ್. ಬಿ, ನಿತೇಶ್ ಕುಮಾರ್.ವೈ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ್ ಆಳ್ವ ಬಾರ್ಯ, ಅರ್ಥಧಾರಿಗಳಾಗಿ ರವೀಂದ್ರ ದರ್ಬೆ(ಧರ್ಮರಾಯ), ದಿವಾಕರ ಆಚಾರ್ಯ ಗೇರುಕಟ್ಟೆ, ಪ್ರದೀಪ ಹೆಬ್ಬಾರ್ ಚಾರ (ವ್ಯಾಸ ಮಹರ್ಷಿ,) ಶ್ರೀಧರ ಎಸ್ಪಿ ಸುರತ್ಕಲ್ (ಭೀಮ), ಸತೀಶ ಶಿರ್ಲಾಲು(ವೃಷಕೇತು), ಜಯರಾಮ ನಾಲ್ಗುತ್ತು(ಮೇಘನಾದ), ಜಿನೇಂದ್ರ ಜೈನ್ ಬಳ್ಳಮಂಜ (ಶ್ರೀಕೃಷ್ಣ), ಶ್ರುತಿ ವಿಸ್ಮಿತ್ (ಸುವೇಗ), ಗುಡ್ಡಪ್ಪ ಬಲ್ಯ( ಯೌವನಾಶ್ವ) ಬಾಗವಹಿಸಿದ್ದರು.
ಕ್ಷೇತ್ರದ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಸ್ವಾಗತಿಸಿ , ಶ್ರುತಿ ವಿಸ್ಮಿತ್ ಬಲ್ನಾಡು ವಂದಿಸಿದರು.