ಪುತ್ತೂರು: ಉಪಖಜಾನೆಯ ಸಹಾಯಕ ನಿರ್ದೇಶಕಿ ಕಲ್ಪನಾ ಅವರಿಗೆ ಪುತ್ತೂರು ಸರ್ಕಾರಿ ನೌಕರರ ಸಂಘದ ವತಿಯಿಂದ ಸನ್ಮಾನ ನಡೆಯಿತು.
ಪುತ್ತೂರು ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಕಲ್ಪನಾ ಅವರನ್ನು ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ, ಕಾರ್ಯದರ್ಶಿ ಅಬ್ರಹಾಂ ಎಸ್.ಎ., ಕಾರ್ಯಾಧ್ಯಕ್ಷ ಹರಿ ಪ್ರಕಾಶ್ ಬೈಲಾಡಿ, ಉಪಾಧ್ಯಕ್ಷ ರವಿಚಂದ್ರ, ನಾಗೇಶ್, ಚಂದ್ರಶೇಖರ ನಾಯ್ಕ, ಪ್ರಮೋದ್ ಕುಮಾರ್, ಕವಿತಾ, ಸುಲೋಚನಾ, ಆಶಾ ಹಾಗೂ ನೌಕರರ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿ ರಾಮಚಂದ್ರ ಭಟ್ ಹಾಜರಿದ್ದರು.