ರಾಮ ಜನ್ಮಭೂಮಿ ಎಡಿಷನ್ ವಾಚ್ ಧರಿಸಿದ್ದಕ್ಕೆ ಆಕ್ರೋಶ
ಮುಂಬಯಿ: ನಟ ಸಲ್ಮಾನ್ ಖಾನ್ ಧರಿಸಿರುವ ಕೈಗಡಿಯಾರವೊಂದು ಮುಸ್ಲಿಂ ಧರ್ಮಗುರುಗಳ ಆಕ್ರೋಶಕ್ಕೆ ಗುರಿಯಾಗಿದೆ. ಈ ಕೈಗಡಿಯಾರವನ್ನು ಹರಾಮ್ ಎಂದು ಬಣ್ಣಿಸಿರುವ ಧರ್ಮಗುರುಗಳು ಸಲ್ಮಾನ್ ಖಾನ್ ಕ್ಷಮೆ ಯಚಿಸಬೇಕೆಂದು ಹೇಳಿದ್ದಾರೆ.
ಇಷ್ಟಕ್ಕೂ ಈ ವಾಚ್ ‘ರಾಮ ಜನ್ಮಭೂಮಿ ಎಡಿಷನ್’ ಬ್ರ್ಯಾಂಡ್‌ನದ್ದು. ಧರ್ಮಗುರುಗಳ ಕಾರಣ ಇದು. ಈ ಬಗ್ಗೆ ಅಪಸ್ವರ ತೆಗೆದು ಸಲ್ಮಾನ್ ಖಾನ್ ಹರಾಮ್ ಮಾಡಿದ್ದಾರೆ ಎಂದು ದೂರಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಪರ-ವಿರೋಧ ಚರ್ಚೆ ನಡೆಯುತ್ತಿದೆ.
ಸಲ್ಮಾನ್ ಖಾನ್ ಮುಸ್ಲಿಂ ಸಮುದಾಯಕ್ಕೆ ಸೇರದ್ದರೂ ಎಲ್ಲ ಧರ್ಮದವರನ್ನು ಗೌರವಿಸುತ್ತಾರೆ. ಸಿನಿಮಾಗಳಲ್ಲಿ ಭಜರಂಗಿ ಪಾತ್ರವನ್ನು ಅವರು ಮಾಡಿದ್ದಾರೆ. ನಿಜ ಜೀವನದಲ್ಲೂ ಅವರು ಎಲ್ಲ ದೇವರುಗಳನ್ನು ಸಮಾನವಾಗಿ ಕಾಣುತ್ತಾರೆ. ಗಣೇಶೋತ್ಸವ ಸಂದರ್ಭದಲ್ಲಿ ಮನೆಯಲ್ಲೇ ಗಣೇಶನ ವಿಗ್ರಹ ಇಟ್ಟು ಪೂಜಿಸುತ್ತಾರೆ. ಇದೇ ಮನಸ್ಥಿತಿಯಲ್ಲಿ ಅವರು ರಾಮ ಜನ್ಮಭೂಮಿ ದೇವಾಲಯ ಇರುವ ವಾಚ್ ಧರಿಸಿದ್ದಕ್ಕೆ ಟೀಕೆ ಎದುರಿಸಬೇಕಾಗಿದೆ.
ಸಲ್ಮಾನ್ ಖಾನ್ ರಾಮ ಮಂದಿರದ ಪ್ರಚಾರಕ್ಕಾಗಿ ತಯಾರಿಸಿದ ರಾಮ ಮಂದಿರ ಆವೃತ್ತಿಯ ವಾಚ್ ಧರಿಸಿದ್ದಾರೆ. ಮುಸ್ಲಿಂ ಆಗಿ ಕೈಯಲ್ಲಿ ಅಂತಹ ಗಡಿಯಾರವನ್ನು ಧರಿಸುವುದು ಹರಾಮ್ ಎಂದು ಆಲ್ ಇಂಡಿಯಾ ಮುಸ್ಲಿಂ ಜಮಾತ್ನ ಮೌಲಾನಾ ಶಹಾಬುದ್ದೀನ್ ರಾಜ್ವಿ ಹೇಳಿದ್ದಾರೆ.
ಸಲ್ಮಾನ್ ಖಾನ್ ಭಾರತದ ಜನಪ್ರಿಯ ವ್ಯಕ್ತಿ. ಅವರಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಸಲ್ಮಾನ್ ಖಾನ್ ಕೂಡ ಮುಸ್ಲಿಂ. ಹೀಗಿರುವಾಗ ಈ ರೀತಿ ವಾಚ್ ಧರಿಸೋದು ಎಷ್ಟು ಸರಿ? ಸಲ್ಮಾನ್ ಖಾನ್ ಆಗಿರಲಿ ಅಥವಾ ಇನ್ಯಾವುದೇ ಮುಸ್ಲಿಂ ಆಗಿರಲಿ ರಾಮ ಮಂದಿರ ಅಥವಾ ಯಾವುದೇ ಇತರ ಮುಸ್ಲಿಮೇತರ ವಿಷಯವನ್ನು ಪ್ರಚಾರ ಮಾಡುತ್ತಿದ್ದರೆ ಅದನ್ನು ಕಾನೂನುಬಾಹಿರ ಮತ್ತು ಹರಾಮ್ ಎಂದು ಪರಿಗಣಿಸಲಾಗುತ್ತದೆ. ಸಲ್ಮಾನ್ ಖಾನ್ ಅವರು ಷರಿಯತ್ ತತ್ವಗಳನ್ನು ಅನುಸರಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಮೌಲಾನಾ ಆಗ್ರಹಿಸಿದ್ದಾರೆ.
ಸಲ್ಮಾನ್ ಖಾನ್ ಧರಿಸಿರುವುದು ಜಾಕೋಬ್ ಆ್ಯಂಡ್ ಕಂಪನಿ ಹೊರತಂದಿರುವ ರಾಮ್ ಜನ್ಮಭೂಮಿ ಟೈಟಾನಿಯಮ್ ಎಡಿಷನ್ 2 ವಾಚ್. ಇದರ ಬೆಲೆ 34 ಲಕ್ಷ ರೂಪಾಯಿ. ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಮಾರ್ಚ್ 30ರಂದು ರಿಲೀಸ್ ಆಗುತ್ತಿದೆ. ಈ ವಿವಾದ ಸಿನಿಮಾದ ಪ್ರಚಾರದ ತಂತ್ರವೂ ಆಗಿರಬಹುದು ಎಂಬ ಅಭಿಪ್ರಾಯವನ್ನು ಕೆಲವರು ಸೋಷಿಯಲ್ ಮೀಡಿಯದಲ್ಲಿ ಹಂಚಿಕೊಂಡಿದ್ದಾರೆ.