ಉಪ್ಪಿನಂಗಡಿ: ಇಲ್ಲಿನ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ ಇಚ್ಚೂರು ಶ್ರೀ ಬಾಲಸುಬ್ರಹ್ಮಣ್ಯ ದೇವಸ್ಥಾನ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಕರ್ಣ ದಿಗ್ವಿಜಯ ತಾಳಮದ್ದಳೆ ಜರಗಿತು.
ಭಾಗವತರಾಗಿ ಸುರೇಶ್ ರಾವ್. ಬಿ, ನಿತೀಶ್ ಕುಮಾರ್. ವೈ, ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀಪತಿಭಟ್ ಉಪ್ಪಿನಂಗಡಿ, ಗುರುಮೂರ್ತಿ ಅಮ್ಮಣ್ಣಾಯ, ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ್ (ಕೌರವ), ಸತೀಶ ಶಿರ್ಲಾಲು(ಕರ್ಣ 1), ಶ್ರೀಧರ ಎಸ್ಪಿ ಸುರತ್ಕಲ್(ಕರ್ಣ 2), ಮಹಾಲಿಂಗೇಶ್ವರ ಭಟ್ ಪೆರಿಯಡ್ಕ(ದ್ರುಪದ), ಜಯರಾಮ ನಾಲ್ಗುತ್ತು(ಭಗದತ್ತ ), ಗೀತಾ ಕರಾಯ(ರುಗ್ಮ), ಶ್ರುತಿವಿಸ್ಮಿತ್(ಸಹದೇವ ), ಪೂರ್ಣಿಮಾ ರಾವ್(ಸಹದೇವನ ತಾಯಿ ), ದಿವಾಕರ ಆಚಾರ್ಯ ಗೇರುಕಟ್ಟೆ (ಪುರೋಹಿತರು )ಭಾಗವಹಿಸಿದ್ದರು.
ತಾಳಮದ್ದಳೆಯಲ್ಲಿ ಭಾಗವಹಿಸಿದ ಕಲಾವಿದರನ್ನು ಪ್ರಧಾನ ಅರ್ಚಕರಾದ ಸುರೇಶ್ ಪುತ್ತೂರಾಯ ಗೌರವಿಸಿದರು.