ಸುಳ್ಯ: ಕರ್ನಾಟಕ ರಾಜ್ಯ ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ & ಸೈನ್ಸ್ ಬೆಂಗಳೂರು ಇದರ ಬೋರ್ಡ್ ಆಫ್ ಸ್ಟಡೀಸ್ ಚೆಯರ್ ಮೆನ್ ಆಗಿ ಸುಳ್ಯದ ಜನಪ್ರಿಯ ವೈದ್ಯ ಡಾ. ಡಿ ವಿ ಲೀಲಾಧರ್ ಆಯ್ಕೆಯಾಗಿದ್ದಾರೆ.
ರಾಜ್ಯ ವೈದ್ಯಕೀಯ ವಿಭಾಗದಲ್ಲಿಯೇ ಪರಮೋಚ್ಛ ಹುದ್ದೆ ಇದಾಗಿದ್ದು , ರಾಜ್ಯದ ನೂರಾರು ಮಂದಿ ಪ್ರತಿಭಾನ್ವಿತ ವೈದ್ಯರುಗಳ ಪೈಕಿ ಡಾ. ಡಿ ವಿ ಲೀಲಾಧರ್ ಆಯ್ಕೆಯಾಗಿದ್ದಾರೆ.
ಡಾ. ಡಿ .ವಿ ಲೀಲಾಧರ್ ಮುಖ್ಯಸ್ಥರಾಗಿರುವ ಪೀಠದಲ್ಲಿ ಸದಸ್ಯರುಗಳಾಗಿ 14 ಮಂದಿ ಇದ್ದು ಇಬ್ಬರು ನಾಮ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಡಾ.ಡಿ ವಿ.ಲೀಲಾಧರ್ ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಯಾಗಿ , ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುವುದರ ಜೊತೆಗೆ, ಆರೋಗ್ಯ , ಧಾರ್ಮಿಕ, ಕ್ರೀಡೆ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವಾ ಮನೋಭಾವನೆಯಿಂದ ದುಡಿದು ಜನಮೆಚ್ಚುಗೆ ಪಡೆದ ನೆಚ್ಚಿನ ವೈದ್ಯರಾಗಿದ್ದಾರೆ.
ನೂರಾರು ಮಂದಿ ಅಸಾಹಾಯಕರಿಗೆ, ಸಹಾಯ ಹಸ್ತ ಚಾಚುತ್ತಿದ್ದಾರೆ.ಇವರ ಸೇವೆಗೆ “ಸಾಧನ ಶ್ರೀ”, “ಸಮಾಜ ರತ್ನ”, “ಚಿಕಿತ್ಸಾ ರತ್ನ” “ಕನ್ನಡ ಸಾಹಿತ್ಯ ಪ್ರಶಸ್ತಿ”, “ಕನ್ನಡ ಕಸ್ತೂರಿ” “APJ ಅಬ್ದುಲ್ ಕಲಾಂ ಲೈಫ್ ಟೈಮ್ ಎಚೀವ್ ಮೆಂಟ್ ನ್ಯಾಶನಲ್ ಅವಾರ್ಡ್” ಹೀಗೆ ಹಲವು ಪ್ರಶಸ್ತಿಗಳು ಬಂದಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ವರ್ಷದ ಸೇವಾನುಭವದ ಜೊತೆಗೆ, Krnataka Ayurveda & Unani Practitioner board ಬೆಂಗಳೂರು ಇದರ ನಾಮ ನಿರ್ದೇಶಿತ ಸದಸ್ಯರಾಗಿ, C.C.I.M Syllabus setting ಕಮಿಟಿ ಸದಸ್ಯರಾಗಿ, ಬೋರ್ಡ್ ಆಫ್ ಸ್ಟಡೀಸ್ ಬೆಂಗಳೂರು RGUHS ಇದರ ಪದವಿ ಮತ್ತ ಸ್ನಾತಕೋತರ ಪಧವಿ ವಿಭಾಗದ ನಿರ್ದೇಶಕರಾಗಿ, ಕೇರಳ ರಾಜ್ಯದ ತಿರುವಂಡ್ರಮ್ ಆಯುರ್ವೇದ ಕಾಲೇಜು, ವೇದರತ್ನಮ್ ಆಯುರ್ವೇದ ಕಾಲೇಜು, ಪಿ.ಎ ಎಸ್ ವಾರಿಯರ್ಸ್ ಆಯುರ್ವೇದ ಕಾಲೇಜು , ಕೋಟೆಕಲ್ ಆಯುರ್ವೇದ, ಎಂ ವಿ ಆರ್ ಆಯುರ್ವೇದ ಕಾಲೇಜುಗಳ PG Examiner ಆಗಿ, ರಾಜ್ಯ ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಏಂಡ್ ಸೈನ್ಸ್ ಇದರ ವೈಸ್ ಪ್ರೆಸಿಡೆಂಟ್ ಮತ್ತು Principal Forum ಆಗಿ , ರಾಜ್ಯ ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಏಂಡ್ ಸೈನ್ಸ್ ಇದರ2024-25 ನೇ ಸಾಲಿನ LIC Reform Committee ಸದಸ್ಯರಾಗಿ, ರಾಜ್ಯ ರಾಜೀವ ಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಏಂಡ್ ಸೈನ್ಸ್ ಇದರ ಕೌನ್ಸಿಲ್ ಮೆಂಬರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
ಪ್ರಸ್ತುತ ಕರ್ನಾಟಕ ರಾಜ್ಯ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಚೆಯರ್ ಮೆನ್ ಆಗಿ ಸೇವೆ ಸಲ್ಲಿಸಲಿದ್ದಾರೆ. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ನಿವೃತ ಅರಣ್ಯಾಧಿಕಾರಿ ದೋಳ ವೀರಪ್ಪ ಗೌಡ ಮತ್ತು ಗೌರಮ್ಮ ದಂಪತಿಗಳ ದ್ವಿತೀಯ ಪುತ್ರರಾಗಿರುವ ಇವರು ಪತ್ನಿ ಕೆ ವಿ ಜಿ ಯೋಗ ವಿಭಾಗದ ಉಪನ್ಯಾಸಕಿ ಡಾ. ಜಯವಾಣಿ ಮತ್ತು ಪುತ್ರ ಮೋಕ್ಷ್ ರೊಂದಿಗೆ ಸುಳ್ಯದಲ್ಲಿ ನೆಲೆಸಿದ್ದಾರೆ.