ಸುಳ್ಯ: ಲಾರಿ ಮತ್ತು ಬೈಕ್ ನಡುವೆ ತೀರ್ವ ಅಪಘಾತವಾಗಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಮಡಿಕೇರಿ ಸಮೀಪದ ಕಾಟಿಕೇರಿ ಸಮೀಪ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ಬೈಕ್ ಸವಾರ ಕಕ್ಕಬೆ ನಿವಾಸಿ ಶರತ್ (28) ಎಂದು ಪತ್ತೆಹಚ್ಚಲಾಗಿದೆ.
ಕಾರನ್ನು ಹಿಂದಿಕ್ಕಿ ಹೋಗುತ್ತಿದ್ದಾಗ ಲಾರಿ ಅಡಿಗೆ ಬೈಕ್ ಸಮೇತ ಯುವಕ ಬಿದ್ದಿದ್ದಾನೆ ಎನ್ನಲಾಗಿದೆ. ಮಡಿಕೇರಿ ಗ್ರಾಮಾಂತರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹಾಗೂ ಎನ್ ಡಿ ಆರ್ ಎಫ್ ಕೊಡಗು ಸಂಪಾಜೆ ಭಾಗದ ಸದಸ್ಯ ನಾಗೇಶ್ ಈ ಸಂದರ್ಭದಲ್ಲಿ ರಸ್ತೆ ಸಂಚಾರ ಸುಗಮಗೊಳಿಸಲು ಹಾಗೂ ಶವ ಸಾಗಿಸಲು ಸಹಕರಿಸಿದ್ದಾರೆ.