ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ತಾಲೂಕಿನ ಯೋಜನಾಧಿಕಾರಿ ರಮೇಶ ಅವರು ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿ 75000 ರೂಪಾಯಿ ಅನುದಾನವನ್ನು ಮಂಚಿ ಸರಕಾರಿ ಪ್ರೌಢಶಾಲೆಗೆ ಹಸ್ತಾಂತರಿಸಿದರು.
ಮಂಚಿ ಗ್ರಾಮದ ಸಭಾಭವನ ನಿರ್ಮಾಣಕ್ಕೆ ಈ ಅನುದಾನ ನೀಡಲಾಗಿದೆ.
ಮುಂಚಿ ಒಕ್ಕೂಟ ಅಧ್ಯಕ್ಷ ದಿವಾಕರ್ ನಾಯಕ್, ವಲಯ ಮೇಲ್ವಿಚಾರಕರು, ಸೇವಾಪ್ರತಿನಿಧಿ, ಶಾಲಾ ಮುಖ್ಯಶಿಕ್ಷಕರು ಹಾಗೂ ಆಡಳಿತ ಮಂಡಳಿ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.