ಸದನದೊಳಗೆ ಪ್ರಿಯಾಂಕ ಗಾಂಧಿಯ ಕೆನ್ನೆ ಸವರಿದ ರಾಹುಲ್‌ ಗಾಂಧಿ

ಸಹೋದರಿಯ ಮೇಲಿನ ಪ್ರೀತಿಯನ್ನು ಸಂಸತ್ತಿನೊಳಗೆ ತೋರಿಸಿ ಎಡವಟ್ಟು

ನವದೆಹಲಿ : ಸಂಸತ್ತಿನ ಒಳಗೂ ಏನಾದರೊಂದು ಎಡವಟ್ಟು ಮಾಡಿಕೊಂಡು ಟೀಕೆಗಳಿಗೆ ಗುರಿಯಾಗುತ್ತಿರುವ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಈಗ ಸದನದ ಒಳಗೆ ಸಹೋದರಿ ಪ್ರಿಯಾಂಕ ವಾಡ್ರಾ ಗಾಂಧಿಯ ಕೆನ್ನೆ ಸವರಿ ಕಾಂಗ್ರೆಸ್‌ಗೆ ತಿವ್ರ ಮುಜುಗರವುಂಟುಮಾಡಿದ್ದಾರೆ.
ಎರಡು ವರ್ಷದ ಹಿಂದೆ ಹಮ್ಮಿಕೊಂಡ ಭಾರತ್‌ ಜೋಡೊ ಯಾತ್ರೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿದ್ದಾಗ ಯಾತ್ರೆಯನ್ನು ಸೇರಿಕೊಂಡ ಪ್ರಿಯಾಂಕ ಗಾಂಧಿಯನ್ನು ರಾಹುಲ್‌ ಗಾಂಧಿ ಸಾರ್ವಜನಿಕರ ಎದುರೇ ಬರಸೆಳೆದು ಅಪ್ಪಿ ಹಿಡಿದು ಕೆನ್ನೆಗೆ ಮುತ್ತಿಕ್ಕಿದ ವೀಡಿಯೊ ವೈರಲ್‌ ಆಗಿತ್ತು. ಈಗಲೂ ರಾಹುಲ್‌ ಗಾಂಧಿಯನ್ನು ಲೇವಡಿ ಮಾಡಲು ಈ ವೀಡಿಯೊವನ್ನು ಬಳಸಿಕೊಳ್ಳಲಾಗುತ್ತದೆ. ಇದೇ ಮಾದರಿಯ ವರ್ತನೆಯನ್ನು ರಾಹುಲ್‌ ಗಾಂಧಿ ಇತ್ತೀಚೆಗೆ ಸದನದ ಒಳಗೆ ತೋರಿಸಿ ಸ್ಪೀಕರ್‌ ಓಂ ಬಿರ್ಲಾ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿನ್ನೆ ಲೋಕಸಭೆಯಲ್ಲಿ ಅಶಿಸ್ತು ಪ್ರದರ್ಶಿಸಿದ ರಾಹುಲ್ ಗಾಂಧಿಯನ್ನು ಸ್ಪೀಕರ್ ಓಂ ಬಿರ್ಲಾ ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡು ಸದನದ ಘನತೆಯನ್ನು ಎತ್ತಿಹಿಡಿಯಲು ಸದಸ್ಯರು ಪಾಲಿಸಬೇಕಾದ ನಡವಳಿಕೆ ಹೇಗಿರಬೇಕು ಎಂಬುದು ತಿಳಿದುಕೊಳ್ಳಬೇಕೆಂದು ಹೇಳಿದ್ದಾರೆ.
ರಾಹುಲ್ ಗಾಂಧಿಯನ್ನು ಟೀಕಿಸಿದ್ದಕ್ಕೆ ಓಂ ಬಿರ್ಲಾ ಯಾವುದೇ ಕಾರಣ ನೀಡದಿದ್ದರೂ, ಬಿಜೆಪಿ ದಿನಾಂಕ ಉಲ್ಲೇಖಿಸದ ವೀಡಿಯೊವೊಂದನ್ನು ಬಿಡುಗಡೆ ಮಾಡಿದೆ. ಸದನದ ಕಲಾಪದ ಸಮಯದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕಾ ಗಾಂಧಿಯ ಕೆನ್ನೆ ಸವರುತ್ತಿರುವ ವೀಡಿಯೊ ಅದಾಗಿದೆ.

ಬಹಳ ದಿನಗಳ ಬಳಿಕ ಸಂಸತ್ತಿನಲ್ಲಿ ಕಾಣಿಸಿಕೊಂಡ ರಾಹುಲ್ ಗಾಂಧಿ ಸದನದಲ್ಲಿ ತನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ನಿನ್ನೆ ದೂರಿದ್ದಾರೆ. ರಾಹುಲ್ ಅವರನ್ನು ಖಂಡಿಸುವಾಗ ಬಿರ್ಲಾ ಬಹುಶಃ ಈ ಘಟನೆಯನ್ನು ಮನಸ್ಸಿನಲ್ಲಿಟ್ಟುಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಈ ಸದನದಲ್ಲಿ ತಂದೆ, ಮಗಳು, ತಾಯಿ, ಗಂಡ, ಹೆಂಡತಿ ಯಾರೇ ಕೂಡ ಸದಸ್ಯರಾಗಿರಬಹುದು. ಆದರೆ ಅವರೊಂದಿಗೆ ನಿಯಮ 349ರ ಪ್ರಕಾರ ವರ್ತಿಸಬೇಕು ಎಂದು ಓಂ ಬಿರ್ಲಾ ಪಾಠ ಹೇಳಿದ್ದಾರೆ.
ರಾಹುಲ್ ಗಾಂಧಿ ಸಂಸತ್ತಿನ ಹೊರಗೆ ಮಾತನಾಡಿ, ಸ್ಪೀಕರ್ ಎದ್ದು ಹೊರಟುಹೋದರು. ಅವರು ನನಗೆ ಒಂದು ಮಾತನ್ನೂ ಮಾತನಾಡಲು ಬಿಡಲಿಲ್ಲ. ಅವರು ನನ್ನ ಬಗ್ಗೆ ಮಾತನಾಡುತ್ತಿದ್ದರು, ಮತ್ತು ಅವರು ನನ್ನ ಬಗ್ಗೆ ಏನು ಹೇಳಿದರು ಎಂದು ನನಗೆ ತಿಳಿದಿಲ್ಲ, ಎಲ್ಲವೂ ಆಧಾರರಹಿತವಾಗಿದೆ. ನಾನು ನೀವು ನನ್ನ ಬಗ್ಗೆ ಮಾತನಾಡಿದಂತೆ ನನಗೆ ಮಾತನಾಡಲು ಅವಕಾಶ ನೀಡಿ ಎಂದು ಹೇಳಿದೆ, ಆದರೆ ಅವರು ಒಂದು ಮಾತನ್ನೂ ಹೇಳದೆ ಹೊರಟುಹೋದರು. ಅದರ ಅಗತ್ಯವಿಲ್ಲದಿದ್ದಾಗ ಅವರು ಸದನವನ್ನು ಮುಂದೂಡಿದರು ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಈ ವೀಡಿಯೊ ಬಿಡುಗಡೆ ಮಾಡಿದೆ.

































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top