ಪುತ್ತೂರು: ಕೃಷ್ಣ ನಗರದ ಅಲಂಬುಡದಲ್ಲಿರುವ ಎ.ವಿ.ಜಿ. ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿಯಾಗಿ ನಿವೃತ್ತ ಉಪನ್ಯಾಸಕ, ಜೇಸೀ ತರಬೇತುದಾರ ಮತ್ತು ಖ್ಯಾತ ಯಕ್ಷಗಾನ ತಾಳಮದ್ದಳೆ ಅರ್ಥದಾರಿಯೂ ಆಗಿರುವ ಗುಡ್ಡಪ್ಪ ಗೌಡ ಬಲ್ಯ ಅವರು ಅಧಿಕಾರ ಸ್ವೀಕರಿಸಿದರು.
35 ವರ್ಷಗಳ ಬೋಧನ ಅನುಭವ ಇರುವ ಇವರು ಈ ಶಾಲೆಯ ಆರಂಭದಿಂದಲೇ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಸ್ಥೆಯ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆಯವರು ದಾಖಲೆಗಳ ಕಡತಗಳನ್ನು ನೀಡಿ ಶ್ರೀಯುತರನ್ನು ಆಡಳಿತಾಧಿಕಾರಿಯೆಂದು ಘೋಷಿಸಿ ಶುಭ ಹಾರೈಸಿದರು.
ನಿರ್ದೇಶಕರಾದ ಗೌರಿ ಬನ್ನೂರು, ಗಂಗಾಧರ ಗೌಡ, ಸಂಚಾಲಕ ಎ.ವಿ. ನಾರಾಯಣ, ಪ್ರಾಂಶುಪಾಲೆ ಸವಿತಾ ಕುಮಾರಿ, ಕಚೇರಿ ಸಿಬ್ಬಂದಿ ವನಿತಾ ಶುಭ ಹಾರೈಸಿದರು. ಉಪಾಧ್ಯಕ್ಷ ಉಮೇಶ್ ಗೌಡ ಮಳುವೇಲು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.