ಪುತ್ತೂರು: ಶಾಲಾ ಪರೀಕ್ಷಾ ವಠಾರದಲ್ಲಿ ಫಿಲಂ ಶೂಟಿಂಗ್ ಇಂದು ಬೆಳಗ್ಗೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರು ಚರ್ಚಾ ಸೈಂಟ್ ವಿಕ್ಚರ್ಸ್ ಶಾಲಾ ವಠಾರದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುತ್ತಿದ್ದರಿಂದ ಪೋಷಕರು ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ದೂರಿದ್ದಾರೆ.
200 ಮೀಟರ್ ಅಂತರದಲ್ಲಿ ಸೆಕ್ಷನ್ ಜಾರಿಯಲ್ಲಿದ್ದರೂ ಶೂಟಿಂಗ್ ನಡೆದ ಮತ್ತು ಪೋಷಕರ ದೂರಿಗೆ ಸಂಬಂಧಿಸಿ ಸ್ಥಳಕ್ಕೆ ಬಿಇಒ ಆಗಮಿಸಿ ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಮದ್ಯಾಹ್ನದ ಬಳಿಕ ಶೂಟಿಂಗ್ ಗೆ ಅನುಮತಿಯನ್ನು ನೀಡಲಾಗಿದೆ ಎನ್ನಲಾಗಿದೆ.