ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಪ್ರಥಮ ವರ್ಷದ ವಾಣಿಜ್ಯ ಪದವಿ ವಿದ್ಯಾರ್ಥಿಗಳು ಒಂದು ದಿನದ ಅಧ್ಯಯನ ಭೇಟಿ ಕಾರ್ಯಕ್ರಮ ನಡೆಯಿತು.
ಮುರುಳ್ಯದ ಕ್ಷೀರ ಎಂಟರ್ಪ್ರೈಸಸ್ ಇಲ್ಲಿಗೆ ಭೇಟಿ ನೀಡಿ ಈ ಸಂಸ್ಥೆಯ ಸಂಸ್ಥಾಪಕರಾದ ರಾಘವ ಗೌಡ ಅವರ ಸಂಶೋಧನೆ ಮತ್ತು ಸಾಧನೆ, ಸಂಸ್ಥೆಯ ಈಗಿನ ಉತ್ಪನ್ನಗಳು ಹಾಗೂ ಯುವ ಪೀಳಿಗೆಗೆ ಪೂರಕವಾದ ವಿಚಾರಗಳನ್ನು ಸಂಸ್ಥೆಯ ಮಾಲಕರಾದ ಮೈನಾ ಮತ್ತು ಮಧು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ಪಂಜದ ವನಸಿರಿ ಇಲ್ಲಿಗೆ ಭೇಟಿ ನೀಡಿ, ಇದರ ಮಾಲಕರಾದ ದಯಾಪ್ರಸಾದ್ ಚೀಮುಳ್ಳು ಇವರು ತಮ್ಮ ತೋಟದಲ್ಲಿ ಲಭ್ಯವಿರುವ ಸುಮಾರು ಒಂದು ಸಾವಿರಕ್ಕಿಂತ ಹೆಚ್ಚಿನ ವಿವಿಧ ಬಗೆಯ ಹಣ್ಣಿನ ತಳಿಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕ ರಮನಾಥ್ ಹಾಗೂ ಅಶ್ವಿನಿ ಎಸ್ .ಎನ್ ಸಂಯೋಜಿಸಿದರು.