SPYSS ಹಾಗೂ ಶ್ರೀ ರಾಮ ಸಮುದಾಯ ಭವನ ಶಾಖೆ ಬೆಳಿಯೂರುಕಟ್ಟೆ ಇದರ ಸಹಯೋಗದಲ್ಲಿ ಮಾತೃ ವಂದನ ಕಾರ್ಯಕ್ರಮ

ಪುತ್ತೂರು : ತಾಲೂಕು ಬೆಳಿಯೂರು ಕಟ್ಟೆಯಲ್ಲಿ ಶ್ರೀರಾಮ ಸಮುದಾಯ ಶಾಖೆಯ ಮಾತೃ ಪೂಜನ, ಮಾತೃ ವಂದನ,ಮಾತೃ ಧ್ಯಾನ ಮತ್ತು ಮಾತೃ ಭೋಜನ ಕಾರ್ಯಕ್ರಮ  ಮಾ.23 ಭಾನುವಾರದಂದು ನಡೆಯಿತು.

ಪ್ರಾಂತ ಪ್ರಶಿಕ್ಷಣ ಪ್ರಮುಖರು ಲಕ್ಷ್ಮೀ ನಾರಾಯಣ, ಇವರು ತಾಯಿ ಹೃದಯದ ಅಂತಕರಣದ ವಿವಿಧ ಸ್ತರಗಳನ್ನು ಭಾವುಕರಾಗಿ ತಿಳಿಸಿದ ರೀತಿ  ಜನ್ಮ ಜನ್ಮಾoತರದ ನೆನಪು ಇರುವಂತೆ  ಮೂಡಿಸಿರುತ್ತಾರೆ. ಮಾತ್ರವಲ್ಲ ಮಾತೃ ಧ್ಯಾನದ ಮೂಲಕ ತಾಯಿ ಮತ್ತು ನಮ್ಮ ರಕ್ತ ಸಂಬಂಧವನ್ನು ಮತ್ತೆ ಹಸಿರಾಗಿಸಿ ನಮ್ಮ ಉಸಿರಿನಲ್ಲಿ  ಬೆರೆತಿರುವುದನ್ನು  ಅರಿವಿಗೆ ತಂದರು.

ಮುಖ್ಯ ಅತಿಥಿಯಾಗಿ  ಕನ್ಯಾಕುಮಾರಿ ಮಾತನಾಡಿ, ತಾಯಿ ಮತ್ತು ಮಕ್ಕಳ ಅವಿನಾಭಾವ ಸಂಬಂಧ ಮತ್ತು ಸಮಿತಿಯ ಇಂತಹ ಅರ್ಥಪೂರ್ಣ ಕಾರ್ಯಕ್ರಮದ ಅವಶ್ಯಕತೆಯ ಅರಿವನ್ನು ತಿಳಿಸಿದರು. 

































 
 

ಕಾರ್ಯಕ್ರಮದ ಅಧ್ಯಕ್ಷೀಯತೆಯನ್ನು ವಹಿಸಿದ ಸೌಮ್ಯ ಬೆಳಿಯೂರು ಕಟ್ಟೆಯ ಪರಿಸರದಲ್ಲಿ ಯೋಗದ ದೀಪವನ್ನು ಬೆಳಗಿಸಿ, ಮಾತನಾಡಿ, ನುಡಿ ಮುತ್ತುಗಳು ಮಾತೃದೇವೋಭವದ ಅರಿವುಗಳ ಕುರಿತು ಹಾಗೂ ಸಮಿತಿಯ ಬೆಳವಣಿಗೆ ಅತ್ಯಂತ ಪರಿಣಾಮಕಾರಿಯಾದಂತಹ ಮಾತುಗಳ ಮೂಲಕ ಎಲ್ಲರ ಹೃದಯವನ್ನು ತಲುಪಿಸುವ ಮೂಲಕ ಯೋಗದ ಬೆಳಕನ್ನು ಇನ್ನಷ್ಟು ನಾಗರೀಕ ಬಂಧುಗಳಿಗೆ ಹಂಚುವ ಪುಣ್ಯಕಾರ್ಯಕ್ಕೆ ಎಲ್ಲಾರು ಸಹಕರಿಸಿ ಎಂದು ತಿಳಿಸಿದರು .

ಈ ಸಂದರ್ಭದಲ್ಲಿ ತಾಲೂಕಿನ ಮತ್ತು ಬೆಳಿಯೂರು ಕಟ್ಟೆ ಪರಿಸರದ ದಾಖಲೆ ಸಂಖ್ಯೆಯ ಹೆಚ್ಚಿನ ಬಂಧು ಮಿತ್ರರ ಮತ್ತು ನಾಗರೀಕ ಬಂಧುಗಳ ಶ್ರದ್ದೆಯ ಒಗ್ಗೂಡುವಿಕೆ ಇಡೀ ಶ್ರೀರಾಮ ಸಮುದಾಯ ಭವನ ದ ಸಭಾಂಗಣವನ್ನು ಸಂಭ್ರಮ ಮತ್ತು ಸಡಗರದ ಹಬ್ಬದ ವಾತಾವರಣವನ್ನು ಅನುಭವಿಸುವಂತೆ ಮಾಡಿದೆ. ವಿವಿಧ ಸ್ವಾದಿಷ್ಟಕರ  ರುಚಿಯಾದ ಕೈ ತುತ್ತು ಭಾವಪೂರ್ಣ ಮನಸ್ಸಿಗೆ ಮತ್ತಷ್ಟು ಭಾವುಕತೆಯನ್ನು ಉಂಟುಮಾಡಿದೆ.  ಅತ್ಯದ್ಭುತ ಭಜನೆ ಎಲ್ಲರನ್ನೂ ಭಾವಪರಾಶಗೊಳಿಸಿತು. ಎಲ್ಲರು ಕಾರ್ಯಕ್ರಮಕ್ಕೆ  ಜಿಲ್ಲಾ, ಹಾಗೂ ತಾಲೂಕು ಪ್ರಮುಖರ ಮಾರ್ಗದರ್ಶನ ಮತ್ತು ಪುಣಚ ಶ್ರೀ ಮಾತೃ  ಶಾಖೆಯ ಯೋಗ ಬಂಧುಗಳ ನಿಷ್ಠೆಯ ಸಹಕಾರ ತಾಲೂಕಿನ ಎಲ್ಲಾ ಶಿಕ್ಷಕರ ಮತ್ತು ಯೋಗ ಬಂಧುಗಳ ಪ್ರೇರಣೆ ಹಾಗೂ ಶ್ರೀರಾಮ ಸಮುದಾಯ ಭವನ ಶಾಖೆ, ಬೆಳಿಯೂರು ಕಟ್ಟೆ ಯ ಆತ್ಮೀಯ ಶಿಕ್ಷಕರ ಮತ್ತು ಯೋಗ ಬಂಧುಗಳ ಅವಿರತ ಶ್ರಮ ಮತ್ತು ಒಗ್ಗಟಿನ ಸೇವಾ ಮನೋಭಾವನೆ ಇಂದು ಅವಿಸ್ಮರಣೀಯ ಮತ್ತು ಅತ್ಯದ್ಭುತ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿ ರೂಪುಗೊಂಡಿದೆ.

ಈ ಕಾರ್ಯಕ್ರಮದಲ್ಲಿ ಒಟ್ಟು ಸಂಖ್ಯೆ 365 ಮಂದಿ ಪಾಲ್ಗೊಂಡಿದ್ದಾರೆ.

ರವಿಪ್ರಕಾಶ್ ಮತ್ತು ಇತರರ ಭಕ್ತಿ ಭಾವದ ಭಜನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಉಷಾ ಅವರು ವರದಿಯನ್ನು ವಾಚಿಸಿದರು. ಶೃತಿಯವರು ಸ್ವಾಗತಿಸಿ, ಶೈಲಾ ವಂದಿಸಿದರು. ಕಾರ್ಯಕ್ರಮವನ್ನು ಪವಿತ್ರ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top