ಪುತ್ತೂರು : ಹತ್ತೂರು ಒಡೆಯ ಪುತ್ತೂರಿನ ಮಹತೋಬಾರ ಶ್ರೀ ಮಹಾಲಿಂಗೇಶ್ವರ ಅನೇಕ ಇತಿಹಾಸವನ್ನು ಒಳಗೊಂಡಿದೆ. ಕಾರಣಿಕ ಕಥೆಯನ್ನು ಹೊಂದಿರುವ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಅನ್ನದ ಅಗಳುಗಳು ಮುತ್ತಾಗಿರುವ ಇತಿಹಾಸವಿದೆ. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಈ ಬಾರಿಯ ಜಾತ್ರೆಯಲ್ಲಿ ಭಕ್ತರಿಗೆ ಅನ್ನಪ್ರಸಾದವನ್ನು ದೇವಳದ ಕೆರೆಯ ಬಳಿಯ ವಿಶಾಲವಾದ ಜಾಗದಲ್ಲಿ ವಿತರಣೆ ಮಾಡುವುದೆಂದು ತೀರ್ಮಾನಿಸಿದಂತೆ ಮಾ.24ರಂದು ದೇವಳದ ಕೆರೆಯ ಬಳಿ ಅನ್ನಪ್ರಸಾದ ವಿತರಣೆಗೆ ಚಪ್ಪರ ಮುಹೂರ್ತವನ್ನು ನೆರವೇರಿಸಿದರು.
ಇದೀಗ ಈ ಬಾರಿಯ ಜಾತ್ರೆ ಗತಕಾಲದ ವೈಶಿಷ್ಯ ಕಾಣಲಿದೆ. ಇದಕ್ಕೆ ಪೂರಕವಾಗಿ ಚಪ್ಪರ ಮಹೂರ್ತಕ್ಕೆ ಒಡೆದ ತೆಂಗಿನಕಾಯಿ ಶುಭ ಸೂಚನೆ ನೀಡಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆ, ನಿತ್ಯ ಬಲಿಯ ಬಳಿಕ ದೇವಳದ ಕೆರೆಯ ಬಳಿ ನೈರುತ್ಯ ಭಾಗದಲ್ಲಿ ಚಪ್ಪರ ಮುಹೂರ್ತ ನಡೆಯಿತು.
ದೇವಳದ ಪ್ರಧಾನ ಆರ್ಚಕ ವ್ಯವಸ್ಥಾಪನಾ ಸಮಿತಿ ಸದಸ್ಯ ವೇ ಮ ವಸಂತ ಕೆದಿಲಾಯ ಅವರು ಚಪ್ಪರ ಮುಹೂರ್ತಕ್ಕೆ ಪೂಜಾ ಕಾರ್ಯಕ್ರಮ ನೆರವೇರಿಸಿದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ ಬೇಡಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ ಅವರು ಚಪ್ಪರ ಮುಹೂರ್ತ ನೆರವೇರಿಸಿದರು.
ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಮಾಜಿ ಸದಸ್ಯೆ ವೀಣಾ ಬಿ.ಕೆ, ಚಪ್ಪರಕ್ಕೆ ಮಾರ್ಕಿಂಗ್ ಮಾಡಿದ ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ ರೈ ದೇರ್ಲ, ಉಪಾಧ್ಯಕ್ಷ ನುಳಿಯಾಲು ರವೀಂದ್ರ ಶೆಟ್ಟಿ, ಟ್ರಸ್ಟಿಗಳಾದ ನೋಣಾಲು ಜೈರಾಜ್ ಭಂಡಾರಿ, ಎಂ ದತ್ತಾತ್ರೆಯ ರಾವ್, ಜಯಕುಮಾರ್ ರೈ ಮಿತ್ರಂಪಾಡಿ, ಚಂದ್ರಹಾಸ ರೈ, ನುಳಿಯಾಲು ಸುಜೀರ್ ಶೆಟ್ಟಿ, ವಿಶ್ವನಾಥ್ ನಾಯ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪ್ರಶಾಂತ್ ಭಟ್ ಅವರು ಅರ್ಚಕರಿಗೆ ಸಹಾಯಕರಾಗಿದ್ದರು. ಪದ್ಮನಾಭ, ಭದ್ರತಾ ಸಿಬ್ಬಂದಿ ಚಂದ್ರ ಸಹಕರಿಸಿದರು. ಚಪ್ಪರ ಮುಹೂರ್ತ ಕೊನೆಯಲ್ಲಿ ಚಪ್ಪರ ನಿರ್ಮಾಣ ಕಾರ್ಯದ ವಿಜಯಶ್ರೀ ಶಾಮಿಯಾನದ ಮಾಲಕರಿಗೆ ಚಪ್ಪರದ ನಿರ್ಮಾಣದ ಕುರಿತು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಿಂದ ಸಲಹೆ ನೀಡಲಾಯಿತು.