ಪುತ್ತೂರು: ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನ ಮಾನವಿಕ ಸಂಘ ಆಯೋಜಿಸಿದ “ಡ್ರೀಮ್ಸ್ 25” ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಂಪ್ಯ ಅಕ್ಷಯ ಕಾಲೇಜು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.
ಫ್ಯಾಶನ್ ಶೋದಲ್ಲಿ ಪ್ರಥಮ, ಗಾಯನದಲ್ಲಿ ಪ್ರಥಮ, ಸಮೂಹ ನೃತ್ಯದಲ್ಲಿ ದ್ವಿತೀಯ, ಫೇಸ್ ಪೇಂಟಿಂಗ್ ನಲ್ಲಿ ದ್ವಿತೀಯ, ಮತ್ತು ಮೋಕ್ ಪ್ರೆಸ್ ನಲ್ಲಿ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದೆ.
ಕಾಲೇಜಿನ ಅಧ್ಯಕ್ಷರು, ಆಡಳಿತ ಮಂಡಳಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗ, ವಿಜೇತ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.