ಶರವೂರು : ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಇದರ ವತಿಯಿಂದ ದಿನಾಂಕ 22/03/2025 ರಂದು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಸೇವಾರೂಪದ ಕೌಶಿಕ ಚರಿತ್ರೆ ತಾಳಮದ್ದಳೆ ನಡೆಯಿತು.
ಭಾಗವತರಾಗಿ ಮಹೇಶ್ ಕನ್ಯಾಡಿ, ಗೋಪಾಲ ಭಟ್ ನೈಮಿಷ, ಸುಬ್ರಹ್ಮಣ್ಯ ರಾವ್ ಶರವೂರು, ಕುಸುಮಾಕರ ಆಚಾರ್ಯ ಹಳೆನೇರೆಂಕಿ. ಹಿಮ್ಮೇಳದಲ್ಲಿ ಪದ್ಮರಾಜ ತಂತ್ರಿ, ಭಾಸ್ಕರ ಕೋಳ್ಯೂರು, ಚಂದ್ರ ದೇವಾಡಿಗ, ಶಿಕಿನ್ ಶರ್ಮ ಶರವೂರು,ಚಕ್ರತಾಳದಲ್ಲಿ ಸುರೇಂದ್ರ ಭಟ್ ಕಳಸ ಮತ್ತುಅರ್ಥಧಾರಿಗಳಾಗಿ (ಕೌಶಿಕ), ದಿನೇಶ್ ಶೆಟ್ಟಿ ಕಾವಳಕಟ್ಟೆ, (ವಶಿಷ್ಟ ಮತ್ತು ದೇವೇಂದ್ರ), ಗಣರಾಜ ಕುಂಬ್ಳೆ (ತ್ರಿಶಂಕು), ಗಣೇಶ್ ಶೆಟ್ಟಿ ಕನ್ನಡಿಕಟ್ಟೆ, (ವಾಸಿಷ್ಠರು), ಅಂಬಾ ಪ್ರಸಾದ್ ಪಾತಾಳ(ವಿಶ್ವಾಮಿತ್ರ), ರಾಧಾಕೃಷ್ಣ ಕಲ್ಚಾರ್ ಭಾಗವಹಿಸಿದ್ದರು.
ಗೋಪಾಲಕೃಷ್ಣ ಪಡ್ಡಿಲ್ಲಾಯ ತೋಟಂತಿಲ, ವಿಠಲ ರೈ ಮತ್ತು ಮಕ್ಕಳು ಮನವಳಿಕೆ, ಶ್ರೀನಿವಾಸ ರಾವ್ ಮತ್ತು ಮಕ್ಕಳು ಶರವೂರು, ಗಣರಾಜ ಕುಂಬ್ಳೆ, ನಾಗಪ್ಪ ಗೌಡ ಮರುವಂತಿಲ, ತಾರಾನಾಥ ರೈ ನಗ್ರಿ, ಸುಬ್ರಹ್ಮಣ್ಯ ರಾವ್ ಮತ್ತು ಮಕ್ಕಳು ಶರವೂರು, ತಾಳಮದ್ದಳೆ ಸೇವಾರ್ಥಿಗಳಾಗಿದ್ದರು.