ಕಡಬ: ಸಾರಣೆ ಕೆಲಸಕ್ಕೆಂದು ಹೋದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಕಡಬದಲ್ಲಿ ನಡೆದಿದೆ. ಈ ಕುರಿತಾಗಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ವ್ಯಕ್ತಿಯನ್ನು ಕಡಬ ತಾಲೂಕು ಬಳ್ಳ ಗ್ರಾಮದ ಜೋಗಿ ಮನೆ ಚೆನ್ನಕೇಶವ ಜೋಗಿ (61) ಎಂದು ಪತ್ತೆಹಚ್ಚಲಾಗಿದೆ.
ಮಾ.11 ರಂದು ತನ್ನ ಮನೆಯಿಂದ ಕೋಡಿಂಬಾಳಕ್ಕೆ ಸಾರಣೆ ಕೆಲಸಕ್ಕೆ ಹೋದವರು ತಿರುಗಿ ಬರಲಿಲ್ಲ. ಇವರ ಬಳಿ ಇದ್ದ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಯಿಂದ ಹೊರ ಹೋಗುವ ವೇಳೆ ಉದ್ದ ತೋಳಿನ ಹಸಿರು ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ತುಳು, ಮಲಯಾಳಂ ಭಾಷೆ ಮಾತನಾಡುತ್ತಾರೆ. ಮಾಹಿತಿ ಸಿಕ್ಕಿದಲ್ಲಿ ಸುಬ್ರಹ್ಮಣ್ಯ ಠಾಣೆಗೆ ತಿಳಿಸುವಂತೆ ವಿನಂತಿಸಲಾಗಿದೆ.