‘ಗೌಡ್ರ ಕಪ್’ ಕ್ರಿಕೆಟ್ ಟೂರ್ನಮೆಂಟ್ ನಡೆಯಲಿದ್ದು ಅದರಲ್ಲಿ ಸ್ಪರ್ಧಿಸಲಿರುವ ‘ ಶಕ್ತಿ ಕೃಷ್ಣ ನಗರ ‘ ತಂಡಕ್ಕೆ ಎ.ವಿ.ಜಿ. ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಜೆರ್ಸಿಗಳನ್ನು ವಿತರಿಸಲಾಯಿತು.
ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಂಡದ ನಾಯಕ ಪುಷ್ಪರಾಜ್ ಗೌಡ ಜೆರ್ಸಿ ಸ್ವೀಕರಿಸಿದರು.
ಎ.ವಿ.ಜಿ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕಳುವಾಜೆ ವೆಂಕಟ್ ರಮಣ ಗೌಡ ಅವರು ಜೆರ್ಸಿ ವಿತರಿಸಿ ಶುಭ ಹಾರೈಸಿದರು.
ಸಂಚಾಲಕ ಎ. ವಿ. ನಾರಾಯಣ, ಕಾರ್ಯದರ್ಶಿ ಗುಡ್ಡಪ್ಪ ಗೌಡ ಬಲ್ಯ, ಉಪಾಧ್ಯಕ್ಷ ಉಮೇಶ್ ಮಳುವೇಲು, ನಿರ್ದೇಶಕ ಸೀತಾರಾಮ ಕೇವಳ, ಪೋಷಕರ ಸಂಘದ ಅಧ್ಯಕ್ಷೆ ಸೌಮ್ಯಾ ಹೆಗ್ಡೆ, ಮುಖ್ಯೋಪಾಧ್ಯಾಯಿನಿ ಸವಿತಾ, ಪೋಷಕ ಸಂಘದ ಉಪಾಧ್ಯಕ್ಷೆ ಅಶ್ವಿನಿ ಶೇಖರ, ನಿರ್ದೇಶಕಿಯಾದ ಕಾವ್ಯ, ಯೋಗೀಶ್ ಮತ್ತು ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.