ಪುತ್ತೂರು : ಯುವ ಕಲಾವಿದ ಮಯೂರ್ ಅಂಬೆಕಲ್ಲು ನಿರ್ದೇಶನದ “ಭಾವತೀರ ಯಾನ” ಕನ್ನಡ ಸಿನೆಮಾ ಫೆ.21 ರಂದು ರಾಜ್ಯಾದ್ಯಂತ ತೆರೆ ಕಂಡಿದ್ದು, ಹಾಗೆಯೇ ಪುತ್ತೂರಿನ ಜಿಎಲ್ ಒನ್ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್ ನಲ್ಲಿ ಪ್ರದರ್ಶನಗೊಂಡು ಒಂದು ತಿಂಗಳು ಪೂರ್ಣಗೊಂಡ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಸಂಭ್ರಮಾಚರಣೆ ಮಾಡಲಾಯಿತು.
ಪುತ್ತೂರಿನಲ್ಲಿ ಫೆ.21 ರಂದು ಸಿನೆಮಾ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ರಂಗನಟಿ ವಸಂತಲಕ್ಷ್ಮೀ ಶಶಿಧರ್ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ನಟ ತೇಜಸ್ ಕಿರಣ್ ಹಾಗೂ ನಟಿ ಆರೋಹಿ ನೈನಾ, ಸಹನಟ ಸಂದೀಪ ರಾಜ್ ಗೋಪಾಲ್ ಉಪಸ್ಥಿತರಿದ್ದರು. ಚಿತ್ರ ನಿರ್ದೇಶಕ ಮಯೂರ ಅಂಬೇಕಲ್ಲು, ವಿವಿಧ ಮುಖಂಡರುಗಳಾದ ಸಾಂದೀಪ ವಿಶೇಷ ಮಕ್ಕಳ ಶಾಲಾ ಸಂಚಾಲಕ ಎಂ.ಬಿ.ಸದಾಶಿವ, ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ತುಳುರಂಗ ಕಲಾವಿದ ನವೀನ್ ಡಿ. ಪಡೀಲ್, ಹಿರಿಯ ಸಹಕಾರಿ ಜಾಕೆ ಮಾಧವ ಗೌಡ, ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು, ಸಿನಿಮಾ ವಿತರಕರಾದ ರಾಜೇಶ್ ಕೀಲಂಬಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಳಿಕ ಒಂದು ತಿಂಗಳ ಸಂಭ್ರಮಾಚರಣೆ ಪ್ರಯುಕ್ರ ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಲಾಯಿತು.
ಮಯೂರ್ ಅಂಬೆಕಲ್ಲು ಅತಿಥಿಗಳಿಗೆ ಸ್ಮರಣಿಕೆ ವಿತರಿಸಿದರು. ಪುತ್ತೂರಿನ ಸುದ್ದಿಬಿಡುಗಡೆ, ಸುಳ್ಯದ ಅಮರಸುದ್ದಿ ಸುಳ್ಯ, ವಿ.ಜೆ.ವಿಖ್ಯಾತ್ ಮತ್ತು ಇತರ ಮಾಧ್ಯಮದವರು ಉಪಸ್ಥಿತರಿದ್ದರು.
ನ್ಯೂಸ್ ಪುತ್ತೂರಿನ ವಾರ್ತಾ ವಾಚಕಿ,. ನಿರೂಪಕಿ ಶ್ರೀಮಾ ಕಾರ್ಯಕ್ರಮ ನಿರೂಪಿಸಿದರು. ನ್ಯೂಸ್ ಪುತ್ತೂರಿನ ಅಧ್ಯಕ್ಷ ಸೀತಾರಾಮ ಕೇವಳ ಸ್ವಾಗತಿಸಿದರು. ಶೈಲೇಶ್ ಅಂಬೆಕಲ್ಲು ವಂದಿಸಿದರು.