ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಿಂದ ಮಾರ್ಚ್ 20 ಗುರುವಾರದಂದು ವಿಧಾನಸಭೆಯ ಅಧಿವೇಶನಕ್ಕೆ ಅಂತಿಮ ಬಿ ಎ ವಿದ್ಯಾರ್ಥಿಗಳು ಶೈಕ್ಷಣಿಕ ಭೇಟಿ ನೀಡಿದರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಸ್ವಾತಿ ಕೆ ಮತ್ತು ಉಪನ್ಯಾಸಕ ಭರತ್ ಎಂ.ಎಲ್ ಅವರ ಮಾರ್ಗದರ್ಶನದಲ್ಲಿ ಮತ್ತು ಪ್ರಾಕ್ತನ ವಿದ್ಯಾರ್ಥಿ ಜಯಪ್ರಕಾಶ್ ಎಂ.ಸಿ ಅವರ ಸಹಕಾರದೊಂದಿಗೆ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಂಡು ಕಾರ್ಯಕಲಾಪ ವೀಕ್ಷಿಸಿದರು.
ವಿಧಾನಸಭಾ ಸಚಿವಾಲಯದ ಸಿಬ್ಬಂದಿ ಜ್ಞಾನಶೇಖರ್ ವಿದ್ಯಾರ್ಥಿಗಳಿಗೆ ವಿಧಾನಸಭೆಯ ಸವಿವರ ಮಾಹಿತಿ ನೀಡಿದರು.