ಮುಗೇರು : ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಮಾ.25 ಬುಧವಾರದಂದು 11ನೇ ವರ್ಷದ ಪ್ರತಿಷ್ಠಾವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಹಾಗೂ ಭಜನಾ ಸಂಭ್ರಮ ಬ್ರಹ್ಮಶ್ರೀ ನೀಲೇಶ್ವರ ಆರೋತ್ ಪದ್ಮನಾಭ ತಂತ್ರಿಗಳ ದಿವ್ಯ ನೇತೃತ್ವದಲ್ಲಿ ನಡೆಯಲಿದೆ.
ಮಾ.18 ಮಂಗಳವಾರದಂದು ಬೆಳಗ್ಗೆ 10 ಗಂಟೆಗೆ ಗೊನೆ ಮುಹೂರ್ತ ನಡೆದಿದ್ದು, ಮಾ.25 ಮಂಗಳವಾರ ಬೆಳಗ್ಗೆ 6:30ಕ್ಕೆ ಅರ್ಧ ಏಕಾಹ ಭಜನೆ ಪ್ರಾರಂಭ, ಬೆಳಗ್ಗೆ 10 ಗಂಟೆಗೆ ಊರ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ, ಬಳಿಕ ಭಕ್ತಾದಿಗಳಿಂದ ಸ್ವಚ್ಛತೆ ಹಾಗೂ ಅಲಂಕಾರ ಸೇವೆ, ಸಂಜೆ 5 ಗಂಟೆಗೆ ತಂತ್ರಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಸಂಜೆ 6ರಿಂದ ದೇವತಾ ಪ್ರಾರ್ಥನೆ, ಋತ್ವಿಗ್ವರಣ, ಪ್ರಾಕರ ಶುದ್ದಿ, ವಾಸ್ತು ಬಲಿ, ರಾಕ್ಷೋಘ್ನ ಹೋಮ ಇತ್ಯಾದಿ ಧಾರ್ಮಿಕ ವಿಧಿಗಳು, ಸಂಜೆ 6: 30ಕ್ಕೆ ಅರ್ಧ ಏಕಾಹ ಭಜನೆ ಸಮಾರೋಪ, ಸಂಜೆ 7ಗಂಟೆಯಿಂದ ಕುಣಿತ ಭಜನಾ ಸಂಭ್ರಮ, ರಾತ್ರಿ 8 ಗಂಟೆಗೆ ಮಹಾಪೂಜೆ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನೆರವೇರಲಿದೆ.
ಮಾ,26ರಂದು ಬೆಳಗ್ಗೆ 6ರಿಂದ ಮಹಾಗಣಪತಿ ಹೋಮ,ಪ್ರಾತಃ ಪೂಜೆ ಕಲಶಾರಾಧನೆ, ಕಲಶಾಭಿಷೇಕ, ನಾಗತಂಬಿಲ, ಪರಿವಾರ ದೈವಗಳ ಆರಾಧನೆ, ಪಲ್ಲಪೂಜೆ, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂತರ್ಪಣೆ ನಡೆಯಲಿದೆ.ಬಳಿಕ ಸಂಜೆ 5ರಿಂದ ತ್ರಯಂಬಕಂ ನಡೆಯಲಿದೆ.
ರಾತ್ರಿ 8ರಿಂದ ಮಹಾಪೂಜೆ, ಶ್ರೀದೇವರ ಬಲಿ ಹೊರಟು ಉತ್ಸವ, ಶ್ರೀ ಭೂತಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ದರ್ಶನ ಬಲಿ, ಬಟ್ಟಲುಕಾಣಿಕೆ, ರಾಜಾಂಗಣ ಪ್ರಸಾದ, ವೈದಿಕ ಮಂತ್ರಾಕ್ಷತೆ, ಅನ್ನಸಂತರ್ಪಣೆ ಜರುಗಲಿದೆ.
ಈ ಪುಣ್ಯಕಾರ್ಯಗಳಲ್ಲಿ ಭಕ್ತರು ಸಹಭಾಗಿಗಳಾಗಿ ಶ್ರೀ ವಿಷ್ಣುಮೂರ್ತಿ ದೇವರ , ಪರಿವಾರ ದೇವರುಗಳ ಹಾಗೂ ದೈವಗಳ ಅನುಗ್ರಹಕ್ಕೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಬೇಕಾಗಿ ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.