ಪುತ್ತೂರು: ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ದ.ಕ.ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪಾಂಡುರಂಗ ಹೆಗ್ಡೆ ಮತ್ತು ಉಪಾಧ್ಯಕ್ಷರಾಗಿ ರಾಮಮೋಹನ್ ರೈ ಅವರು ಅಯ್ಕೆಯಾಗಿದ್ದಾರೆ.
ಗೃಹ ನಿರ್ಮಾಣ ಸಹಕಾರ ಸಂಘದ ಚುನಾವಣೆಗೆ ಮಾ.20ಕ್ಕೆ ನಾಮಪತ್ರ ಸಲ್ಲಿಸಿ, ಅದೇ ದಿನ ನಾಮಪತ್ರ ಹಿಂಪಡೆಯಲು ಹಾಗು ಬಳಿಕ ಮತದಾನವೂ ಒಂದೆ ದಿನಕ್ಕೆ ನಿಗದಿ ಮಾಡಿದಂತೆ ಎಲ್ಲಾ 13 ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಅಜಿತ್ ಕುಮಾರ್ ಕೆ, ರಾಮಮೋಹನ್ ರೈ ಎಂ.ಕೆ, ರಘುನಾಥ ಬಿ, ಎ.ನಾಗೇಶ ರಾವ್, ಜಯರಾಜ ಯು, ನಹುಷ ಪಿ.ಬಿ, ಎ.ಎಲ್.ಹೆಚ್ ಕೆದಿಲಾಯ, ಎನ್.ಆನಂದ ಆಚಾರ್ಯ, ಪಾಂಡುರಂಗ ಹೆಗ್ಡೆ ಪಿ, ಜ್ಯೋತಿ ಆರ್ ನಾಯಕ್, ಜ್ಯೋತಿ ಎನ್.ಎನ್, ನಾರಾಯಣ ನಾಯ್ಕ ಎಮ್, ಶ್ಯಾಮಲಾ ಅವರು ಅವಿರೋಧವಾಗಿ ಆಯ್ಕೆಗೊಂಡರು. ಸಂಜೆ ವೇಳೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯ ಅವಿರೋಧವಾಗಿ ಆಯ್ಕೆಗೊಂಡಿದೆ. ಚುನಾಣಾಧಿಕಾರಿಯಾಗಿ ಶೋಭಾ ಎನ್.ಎಸ್ ಅವರು ಸಹಕರಿಸಿದರು.