ಕಾಣಿಯೂರು: ಕಾಯಿಮಣ ಗ್ರಾಮದ ಮರಕ್ಕಡ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಲ ನೇಮೋತ್ಸವ ಮಾ 20ರಂದು ಪ್ರಾರಂಭಗೊಂಡಿತು.
ರಾತ್ರಿ ದೈವಗಳ ಭಂಡಾರ ತೆಗೆದು, ಕಲ್ಲಮಾಡದಲ್ಲಿ ಧ್ವಜಾರೋಹಣ ನಡೆಯಿತು.
ಮಾ 21ರಂದು ಕಲ್ಲಮಾಡದಲ್ಲಿ ಧ್ವಜಾಪೂಜೆ, ಮಾ 22ರಂದು ಬೆಳಿಗ್ಗೆ ಮಲ್ಲಾರ ದೈವದ ನೇಮೋತ್ಸವ, ದೈಯರ ದೈವದ ನೇಮೋತ್ಸವ, ರಾತ್ರಿ ಭಜನಾ ಕಾರ್ಯಕ್ರಮ ನಡೆಯಲಿದೆ. ಮಾ 23ರಂದು ಮಧ್ಯಾಹ್ನ ಎಲ್ಯಾರ ದೈವದ ನೇಮೋತ್ಸವ, ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ನಾಯರ್ ದೈವದ ನೇಮೋತ್ಸವ, ರಾತ್ರಿ ಅಂಙಣ ಪಂಜುರ್ಲಿ ಮತ್ತು ಗುಳಿಗ ದೈವದ ನೇಮೋತ್ಸವ ನಡೆದು, ಬಳಿಕ ಧ್ವಜಾವರೋಹಣ ನಡೆಯಲಿದೆ. ಮಾ 24ರಂದು ರಾತ್ರಿ ಮರಕ್ಕಡದಲ್ಲಿ ಚಾಮುಂಡಿ ದೈವದ ಭಂಡಾರ ತೆಗೆಯುವುದು, ಬಳಿಕ ಅನ್ನಸಂತರ್ಪಣೆ ನಡೆದು, ಶ್ರೀ ಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.