ಬೆಂಕಿ ಅವಘಡ ಸಂದರ್ಭದಲ್ಲಿ ಪತ್ತೆಯಾಯಿತು ಹಣ
ಹೊಸದಿಲ್ಲಿ: ಬೆಂಕಿ ಅವಘಡ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಾಧೀಶರೊಬ್ಬರ ಮನೆಯಲ್ಲಿ ನೋಟಿನ ರಾಶಿಯೇ ಪತ್ತೆಯಾಗಿದೆ. ಜಸ್ಟಿಸ್ ಯಶವಂತ್ ವರ್ಮ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕ ಪಡೆಯನ್ನು ಕರೆಸಲಾಗಿತ್ತು. ಅಗ್ನಿಶಾಮಕ ಪಡೆಯವರು ಬೆಂಕಿ ನಂದಿಸಿದ ಬಳಿಕ ಮನೆಯ ಬೇರೆ ಬೇರೆ ಕೋಣೆಗಳಲ್ಲಿ ನೋಟಿನ ರಾಶಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಸುಪ್ರೀಂ ಕೋರ್ಟ್ ಈ ನ್ಯಾಯಾಧೀಶರನ್ನು ವರ್ಗಾಯಿಸಲು ಆದೇಶಿಸಿದೆ.
ಯಶವಂತ್ ವರ್ಮ ಅವರಿಗೆ ನೀಡಿದ್ದ ಸರಕಾರಿ ಬಂಗಲೆಯಲ್ಲೇ ಬೆಂಕಿ ಅವಘಡ ಸಂಭವಿಸಿದೆ. ಈ ಸಂದರ್ಭದಲ್ಲಿ ವರ್ಮ ಮನೆಯಲ್ಲಿ ಇರಲಿಲ್ಲ. ಮನೆಯವರು ಗಾಬರಿಯಾಗಿ ಅಗ್ನಿಶಾಮಕ ಪಡೆಗೆ ಫೋನ್ ಮಾಡಿದ್ದಾರೆ. 2021ರಲ್ಲಿ ಅಲಹಾಬಾದ್ ಹೈಕೋರ್ಟಿನಿಂದ ವರ್ಮ ವರ್ಗವಾಗಿ ದಿಲ್ಲಿ ಹೈಕೋರ್ಟ್‌ಗೆ ಬಂದಿದ್ದರು. ಸುಪ್ರಿಂ ಕೋರ್ಟ್ ಸದ್ಯಕ್ಕೆ ಮರಳಿ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಹಣದ ಮೂಲದ ಬಗ್ಗೆ ಜಸ್ಟಿಸ್ ವರ್ಮ ಅವರಿಂದ ವಿವರಣೆ ಕೇಳಿದೆ. ಅವರಿಂದ ತೃಪ್ತಿಕರ ಉತ್ತರ ಬರದಿದ್ದರೆ ತನಿಖೆ ಪ್ರಾರಂಭಿಸಲಾಗುವುದು ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಸಂಜೀವ್ ಖನ್ನ ಹೇಳಿದ್ದಾರೆ.