ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ) ವಿಟ್ಲ ಅಳಿಕೆ ಗ್ರಾಮದ ಮುಳಿಯ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಮಾತನಾಡಿ, ಸಣ್ಣಗುತ್ತು ಅವರು, ಜಾಗ ಹಾಗೂ ದಾಖಲೆ ಇದ್ದಾಗ ಮಾತ್ರ ಸರಕಾರದ ಸವಲತ್ತುಗಳನ್ನು ಪಡೆಯಬಹುದು. ಹಿಂದಿನ ಅವಧಿಯಲ್ಲಿ ಫಲಾನುಭವಿಗಳಿಗೆ ಪಂಚಾಯಿತಿಯಿಂದ 275 ಮನೆಯನ್ನು ವಿತರಿಸಲಾಗಿದೆ. ಗ್ರಾಮಕ್ಕೆ ಸರ್ಕಾರದ ಮನೆ ಬಂದರೂ ಪಲಾನುಭವಿಗಳಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ದಾಖಲೆ ಪತ್ರ ಇರುವ ಫಲಾನುಭವಿಗಳಿಗೆ ಪಂಚಾಯಿತಿ ಹಾಗೂ ಯೋಜನೆ ಸೇರಿ ಮನೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ವಾತ್ಸಲ್ಯ ಮನೆ ಹಸ್ತಾಂತರ ಮಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಮಾತನಾಡಿ, ಸಮಾಜದ ದುರ್ಬಲ ವರ್ಗಕ್ಕೆ ಆಸರೆ ನೀಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರದಿಂದ ಯೋಜನೆ ಹಾಕಲಾಗಿದೆ. ಯೋಜನೆಯ ಮೂಲಕ 22 ವರ್ಷಗಳಿಂದ ವಿಟ್ಲ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ವಾತ್ಸಲ್ಯ ಯೋಜನೆ ಮೂಲಕ 455 ಮನೆಗಳ ಹಸ್ತಾಂತರ ಈಗಾಗಲೇ ಮಾಡಲಾಗಿದೆ. ಕಾರ್ಯಕ್ರಮದ ಮಾಹಿತಿ ಸಿಕ್ಕಿ, ಇನ್ನಷ್ಟು ಮಂದಿ ಯೋಜನೆಯ ಪ್ರಯೋಜನ ಪಡೆಯುವಂತಾಗಬೇಕು. ಬಡವರ ಬದುಕನ್ನು ಆರಿಸುವ ಕೆಲಸ ನಡೆಯಬೇಕು ಎಂದರು.

ಧಾರ್ಮಿಕ ಕಾರ್ಯಕ್ರಮ ಹಾಗೂ ಮನೆಯ ಫಲಕ ಅನಾವರಣವನ್ನು ಜನಜಾಗೃತಿ ಸಮಿತಿಯ ವಲಯ ಅಧ್ಯಕ್ಷ ಬಾಲಕೃಷ್ಣ ಕಾರಂತ ಏರುಂಬು ನಡೆಸಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಅಳಿಕೆ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ಶೆಟ್ಟಿ ಮುಳಿಯ ನಡೆಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಗಿರಿಜ ಬಿಟ್ಟಿಮೂಲೆ , ಭಾಗಿರತಿ, ಕೇಂದ್ರ ಒಕ್ಕೂಟದ ಅಧ್ಯಕ್ಷ ನವೀನ್ ಚಂದ್ರ ಕಣತ್ತೂರು,ಅಳಿಕೆ ವಲಯ ಶೌರ್ಯ ತಂಡದ ಮಾಸ್ಟರ್ ದೀಪಕ್, ಮುಳಿಯ ಒಕ್ಕೂಟದ ಅಧ್ಯಕ್ಷ ಉದಯ, ಮುಳಿಯ ಭಜನಾ ಮಂದಿರದ ಅಧ್ಯಕ್ಷ ಆನಂದ ಶೆಟ್ಟಿ, ಶೌರ್ಯ ವಿಪತ್ತು ಸದಸ್ಯರು, ವಲಯ ಅಧ್ಯಕ್ಷರುಗಳು, ಸಂಘದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಜ್ಞಾನವಿಕಾಸ ಸಮನ್ವಯಧಿಕಾರಿ ಸ್ವಾಗತಿಸಿದರು. ವಿಟ್ಲ ತಾಲೂಕು ಯೋಜನೆ ಅಧಿಕಾರಿ ರಮೇಶ್ ಪ್ರಸ್ತಾವನೆ ಗೈದರು,ಸೇವಾ ಪ್ರತಿನಿಧಿ ವಿನಯ ವಂದಿಸಿದರು. ಮೇಲ್ವಿಚಾರಕಿ ಮಾಲತಿ ಕಾರ್ಯಕ್ರಮ ನಿರೂಪಿಸಿದರು.