ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಶ್ವತ್ಥ ಪೂಜಾ ಕಾರ್ಯ ಮಾ. 21 ಶುಕ್ರವಾರ ( ಇಂದು ) ನಡೆಯಿತು.
ಮಾ. 21, 2025 ಶುಕ್ರವಾರ ಪೂರ್ವಾಹ್ನ ಗಂಟೆ 8.00ರಿಂದ ಅಭಿಷೇಕ,ಗಣಹೋಮ, ಅಶ್ವತ್ಥ ಪೂಜೆ ನೆರವೇರಿತು. ಪೂರ್ವಾಹ್ನ ಗಂಟೆ 9.00ರಿಂದ ಶ್ರೀ ಲಕ್ಷ್ಮೀಪ್ರಿಯ ಭಜನಾ ಮಂಡಳಿ ಬೆಳಂದೂರು ವಲಯ ಇವರಿಂದ ಭಜನಾ ಕಾರ್ಯಕ್ರಮ, ಪೂರ್ವಾಹ್ನ ಗಂಟೆ 11.30ರಿಂದ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.

ಸಂಜೆ 5: 30ರಿಂದ ದುರ್ಗಾಪೂಜೆ ಮತ್ತು ದೀಪಾರಾಧನೆ, ಸಂಜೆ 6.00ರಿಂದ 7.00 ಗಂಟೆಯವರೆಗೆ ಹರಿಭಜನಾ ಮಂಡಳಿ ದೇವಸ್ಯ, ಸವಣೂರು ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 7:00ರಿಂದ 8.00ಗಂಟೆಯವರೆಗೆ ಶ್ರೀ ವಿಶ್ವೇಶ್ವರ ಭಜನಾ ಮಂಡಳಿ ನೆಟ್ಟಣ ಇವರಿಂದ ಭಜನಾ ಕಾರ್ಯಕ್ರಮ, ರಾತ್ರಿ 9.30ರಿಂದ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಪ್ಪನಾಡು ಇವರಿಂದ ರಾಷ್ಟ್ರ-ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದರನ್ನೊಳಗೊಂಡ ಹಲವಾರು ವರ್ಷಗಳ ಹಿಂದೆ ದಾಖಲೆ ಪ್ರದರ್ಶನಗೊಂಡ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಬಂಟನ ಬಲಿ ಸುತ್ತು ಹಾಸ್ಯ ಪ್ರದಾನ ಯಕ್ಷಗಾನ ಬಯಲಾಟ ಪ್ರರ್ದಶನ ನಡೆಯಲಿದೆ.

ಇಂದು ನಡೆಯುವ ಪೂಜಾ ಕಾರ್ಯಕ್ರಮಗಳಿಗೆ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕರಾದ ಶ್ರೀ ಈಶ್ವರ ಚಂದ್ರ ಭಟ್‌ರವರ ಮಾರ್ಗದರ್ಶನದಂತೆ ಜರಗುವ ಅಶ್ವತ್ಥ ಪೂಜಾ ಕಾರ್ಯಗಳಿಗೆ ಸಹೃದಯ ಭಕ್ತಾದಿಗಳು ಆಗಮಿಸಿ, ಶ್ರೀ ದೇವರ ಪುಣ್ಯ ಪ್ರಸಾದವನ್ನು ಸ್ವೀಕರಿಸಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.