ಪುತ್ತೂರು : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ವ್ಯಾಪ್ತಿಯ ಎಂಜಿನಿಯರಿಂಗ್ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕೂಟದ ಮಹಿಳಾ ವಿಭಾಗದ 4×400 ಮೀ. ಹರ್ಡಲ್ಸ್ ನಲ್ಲಿ ಪುತ್ತೂರಿನ ಕೆ.ಎ.ಅನಘಾ ಪ್ರಥಮ ಸ್ಥಾನ ಪಡೆದಿದ್ದಾರೆ.

ಅನಘಾ ಪುತ್ತೂರು ನಗರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಹಾಗೂ ಕವಿತ ಅನಿಲ್ ದಂಪತಿ ಪುತ್ರಿ.
ಪ್ರಸ್ತುತ ಮಂಗಳೂರಿನ ಸೆಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.