ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂಡು ಕತ್ತರಿಸಿ ಡ್ರಮ್‌ನಲ್ಲಿ ತುಂಬಿಸಿಟ್ಟ ಪತ್ನಿ
ಕೋರ್ಟಿಗೆ ಕರೆತಂದಾಗ ವಕೀಲರು ಮಾಡಿದ್ದ ಮಾತ್ರ ಬೇರೆಯೇ ಕ್ರಮ
ಲಖನೌ: ಕಾರ್ಕಳದ ಅಜೆಕಾರು ಸಮೀಪ ದೆಪ್ಪುತ್ತೆಯಲ್ಲಿ ಕಳೆದ ವರ್ಷ ಹೆಂಡತಿಯೇ ಪ್ರಿಯಕರನ ಜೊತೆ ಸೇರಿ ಗಂಡನನ್ನು ವಿಷ ಹಾಕಿ ಕೊಂದ ಕೃತ್ಯದ ಮಾದರಿಯಲ್ಲೇ ಉತ್ತರ ಪ್ರದೇಶದ ಮೇರಠ್‌ನಲ್ಲಿ ಹೆಂಡತಿಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಂದು 15 ತುಂಡುಗಳಾಗಿ ಕತ್ತರಿಸಿ ಶವವನ್ನು ಕತ್ತರಿಸಿ ತುಂಡು ತುಂಡು ಮಾಡಿ ಪ್ಲಾಸ್ಟಿಕ್ ಡ್ರಮ್‌ಗೆ ಹಾಕಿ ಅದರ ಮೇಲೆ ಸಿಮೆಂಟ್ ಸುರಿದು ಮುಚ್ಚಿಟ್ಟಿದ್ದಾಳೆ. ಇಷ್ಟರವರೆಗೆ ನಡೆದೆದ್ದಲ್ಲ ಮಾಮೂಲು ಅಪರಾಧ ಕೃತ್ಯ. ಆದರೆ ನಿನ್ನೆ ಈಕೆಯನ್ನು ಪೊಲೀಸರು ಕೋರ್ಟಿಗೆ ಹಾಜರುಪಡಿಸಲು ಕರೆತಂದಾಗ ವಕೀಲರೆಲ್ಲ ಸೇರಿ ಈಕೆಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನ್ಯಾಯಾಧೀಶರ ಬದಲು ವಕೀಲರೇ ನ್ಯಾಯದಾನ ಮಾಡಲು ಹೋದ ಈ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ನಿನ್ನೆ ಆರೋಪಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರನನ್ನು ಕೋರ್ಟಿಗೆ ಹಾಜರುಪಡಿಸಲು ಪೊಲೀಸರು ಕರೆತಂದಿದ್ದರು. ಈ ಸಂದರ್ಭದಲ್ಲಿ ಅವರನ್ನು ನೋಡಿ ರೊಚ್ಚಿಗೆದ್ದ ವಕೀಲರ ತಂಡವೊಂದು ಕೋರ್ಟ್ ಆವರಣದಲ್ಲೇ ಅವರ ಮೇಲೆ ಹಲ್ಲೆ ಮಾಡಿದೆ. ಪೊಲೀಸರು ವಕೀಲರ ಹಿಡಿತದಿಂದ ಕಷ್ಟಪಟ್ಟು ಇಬ್ಬರನ್ನೂ ರಕ್ಷಿಸಿ ಒಳಗೆ ಕರೆದುಕೊಂಡು ಹೋಗಿದ್ದಾರೆ. ಈ ವೀಡಿಯೊ ಈಗ ಬಹಿರಂಗವಾಗಿದೆ.

ಏನಿದು ಘಟನೆ?
ಬ್ರಿಟನ್‌ನಲ್ಲಿ ಭಾರತೀಯ ನೌಕಾಧಿಕಾರಿಯಾಗಿದ್ದ ಸೌರಭ್ ರಜಪೂತ್ ಐದು ವರ್ಷದ ಮಗಳ ಹುಟ್ಟುಹಬ್ಬ ಆಚರಿಸಲು ಇತ್ತೀಚೆಗೆ ಮನೆಗೆ ಬಂದಿದ್ದರು. ಫೆ.25ರಂದು ಸಂಭ್ರಮದಿಂದ ಮಗಳ ಹುಟ್ಟುಹಬ್ಬವನ್ನೂ ಆಚರಿಸಿದ್ದರು. ಆದರೆ ಪತಿ ಹೊರದೇಶದಲ್ಲಿರುವಾಗ ಪತ್ನಿ ಮುಸ್ಕಾನ್ ರಸ್ತೋಗಿ ಸೋಷಿಯಲ್ ಮೀಡಿಯಾದಲ್ಲಿ ಪರಿಚಿತನಾದ ಸಾಹಿಲ್ ಶುಕ್ಲಾ ಎಂಬ ಯುವಕನ ಜೊತೆ ಅನೈತಿಕ ಸಂಬಂಧ ಬೆಳೆಸಿದ್ದಳು. ಊರಿಗೆ ಬಂದ ಪತಿ ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾರೆ ಎಂದು ಮುಸ್ಕಾನ್ ಪ್ರಿಯಕರನ ಜೊತೆ ಸೇರಿ ಹತ್ಯೆಗೆ ಸಂಚು ರೂಪಿಸಿದ್ದಾಳೆ. ಮಾ.4ರಂದು ರಾತ್ರಿ ಗಂಡನಿಗೆ ನೀಡಿದ ಊಟದಲ್ಲಿ ಮತ್ತು ಏರುವ ಔಷಧಿ ಹಾಕಿದ ಮುಸ್ಕಾನ್ ನಿದ್ರೆಗೆ ಜಾರಿದ ಪತಿಯನ್ನು ಪ್ರಿಯಕರ ಸಾಹಿಲ್ ಶುಕ್ಲಾ ಜತೆ ಸೇರಿ ಚಾಕುವಿನಿಂದ ಇರಿದು ಕೊಂದಿದ್ದಾಳೆ. ಬಳಿಕ ಮೃತದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕಿ ಸಿಮೆಂಟ್ ಸುರಿದು ಸೀಲ್ ಮಾಡಿದ್ದಾಳೆ.
ಮನಾಲಿಗೆ ಪ್ರಿಯಕರನ ಜತೆಗೆ ಜಾಲಿ ಟೂರ್
ಗಂಡನ ಹತ್ಯೆ ಬಳಿಕ ಮನೆಗೆ ಬೀಗ ಹಾಕಿ ಪ್ರಿಯಕರನ ಜತೆ ಹಿಮಾಚಲ ಪ್ರದೇಶದ ಮನಾಲಿಗೆ ಜಾಲಿ ಟೂರ್ ಹೋಗಿದ್ದಾಳೆ. ಗಂಡನ ಬಗ್ಗೆ ಅನುಮಾನ ಬಾರದಂತೆ ನೋಡಿಕೊಳ್ಳಲು ಸೌರಭ್ ಬಳಸುತ್ತಿದ್ದ ಮೊಬೈಲ್ ಮೂಲಕವೇ ಚಾಟ್ ಮಾಡಿದ್ದಾಳೆ. ಈ ಮಧ್ಯೆ ಸೌರಭ್ ಭೇಟಿಗೆ ಸಹೋದರ ಬಂದಾಗ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಕಂಡು ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದ್ದಾರೆ. ಸ್ವಲ್ಪ ದಿನಗಳ ಬಳಿಕ ಸಾಹಿಲ್ ಜತೆ ಮನೆಗೆ ಮರಳಿದ ಮುಸ್ಕಾನ್ ಬಳಿ ಕೂಡ ಸಹೋದರ ತನ್ನ ಅಣ್ಣನ ಬಗ್ಗೆ ವಿಚಾರಿಸಿದ್ದಾನೆ. ಗಂಡನ ವಿಚಾರವಾಗಿ ಸುಳ್ಳು ಹೇಳಿ ಮೈದುನನನ್ನು ವಾಪಸ್ ಕಳಿಸಿದ್ದಾಳೆ.
ಹಣ ವಿದ್‌ಡ್ರಾ ಮಾಡಲು ಹೋದಾಗ ಬಯಲಾಯಿತು ರಹಸ್ಯ
ಪತಿಯ ಬ್ಯಾಂಕ್ ಖಾತೆಯಲ್ಲಿದ್ದ6 ಲಕ್ಷ ರೂ. ಹಣ ಡ್ರಾ ಮಾಡಿಕೊಳ್ಳಲು ತನ್ನ ತಾಯಿ ಕವಿತಾ ರಸ್ತೋಗಿ ಬಳಿ ಮುಸ್ಕಾನ್ ಸಲಹೆ ಕೇಳಿದ್ದಾಳೆ. ಈ ವೇಳೆ ಸೌರಭ್ ಬಗ್ಗೆ ತಾಯಿ ವಿಚಾರಿಸಿದಾಗ ಬಾಯಿತಪ್ಪಿ ಹತ್ಯೆಯ ವಿಷಯವನ್ನು ಬಹಿರಂಗಪಡಿಸಿದ್ದಾಳೆ. ಮೃತದೇಹವನ್ನು ತುಂಡುತುಂಡಾಗಿ ಕತ್ತರಿಸಿ ಡ್ರಮ್‌ನಲ್ಲಿ ಹಾಕಿ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದಾಳೆ.
ಗಂಡನನ್ನೇ ಕೊಂದ ಮಗಳ ದುಷ್ಕೃತ್ಯ ತಿಳಿದು ಅಫಾತಗೊಂಡ ತಾಯಿ ಕವಿತಾ ನೇರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದ್ದಾರೆ. ಬಳಿಕ ಹಂತಕಿ ಮುಸ್ಕಾನ್ ರಸ್ತೋಗಿ ಹಾಗೂ ಪ್ರಿಯಕರ ಸಾಹಿಲ್ ಶುಕ್ಲಾನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದಾಗ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ. ಸೌರಭ್ ಹಾಗೂ ಮುಸ್ಕಾನ್ ರಸ್ತೋಗಿ 2016ರಲ್ಲಿ ಪ್ರೇಮ ವಿವಾಹವಾಗಿದ್ದರು. ದಂಪತಿಗೆ ಪಿಹು ಎಂಬ ಮಗಳಿದ್ದಳು. ಮೇರಠ್‌ನ ಇಂದಿರಾನಗರದಲ್ಲಿ ವಾಸವಿದ್ದರು.