ಪುತ್ತೂರು : ಫೆಬ್ರುವರಿ 21ರಂದು ರಾಜ್ಯಾದ್ಯಂತ ತೆರೆ ಕಂಡು ಪ್ರೇಕ್ಷಕರ ಮನಗೆದ್ದ ಇದೀಗ 30 ದಿನಗಳ ಯಶಸ್ವೀ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ಭಾವ ತೀರ ಯಾನ ಚಿತ್ರ ಮಾರ್ಚ್ 21ರಂದು ತಿಂಗಳ ಸಂಭ್ರಮಾಚರಣೆ ನಡೆಸಲಿದೆ.
ನ್ಯೂಸ್ ಪುತ್ತೂರು ಮೀಡಿಯಾ ಪಾರ್ಟ್ನರ್ ಆಗಿ ಪುತ್ತೂರಿನ GL ONE ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ‘ಭಾವ ತೀರ ಯಾನ’ ತೆರೆ ಕಂಡಿತ್ತು.
ಮಾರ್ಚ್ 21ರಂದು ಸಂಜೆ 4ಕ್ಕೆ ನಡೆಯುವ ಪ್ರದರ್ಶನದಲ್ಲಿ ಚಿತ್ರತಂಡದ ತಾರೆಯರು ಮತ್ತು ನಿರ್ಮಾಪಕ, ನಿರ್ದೇಶಕರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಖ್ಯಾತ ತುಳು ಚಿತ್ರರಂಗದ ಖ್ಯಾತನಾಮರಾದ ನವೀನ್ ಡಿ ಪಡೀಲ್, ಮೈಮ್ ರಾಮದಾಸ್, ಸುಂದರ್ ರೈ ಮಂದಾರ, ಜಿ. ಎಲ್ ಆಚಾರ್ಯ ಸ್ಥಾಪಕರಾದ ಬಲರಾಮ್ ಆಚಾರ್ಯ ಇನ್ನಿತರರು ಉಪಸ್ಥಿತರಿರುತ್ತಾರೆ. ಕನ್ನಡ ರಂಗಭೂಮಿ ಕಲಾವಿದರು, ವಿವಿಧ ರಾಜಕೀಯ, ಸಾಮಾಜಿಕ, ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ. ಪ್ರೇಕ್ಷಕರ ಜೊತೆ ಸಂವಾದ ನಡೆಸುವ ಕಾರ್ಯಭಾಗವೂ ಇರುತ್ತದೆ. ಚಿತ್ರದೊಂದಿಗೆ ನೆಚ್ಚಿನ ತಾರೆಯರು, ಕಲಾವಿದರು ಮತ್ತು ವಿವಿಧ ಪ್ರಖ್ಯಾತ ನಾಯಕರನ್ನು ಒಂದೇ ವೇದಿಕೆಯಲ್ಲಿ ಕಾಣುವ ಸುಯೋಗ ಇದಾಗಲಿದೆ ಎಂದು ನಿರ್ಮಾಪಕ ಶೈಲೇಶ್ ಅಂಬೆಕಲ್ಲು ಮತ್ತು ಸಂಗೀತ ನಿರ್ದೇಶಕ, ಗಾಯಕ ಮಯೂರ್ ಅಂಬೆಕಲ್ಲು ತಿಳಿಸಿದ್ದಾರೆ.