ಪುತ್ತೂರು : ಬಾಲ್ಯೊಟ್ಟು ನಮ್ಮ ಮನೆಯಲ್ಲಿ ರಾಜನ್ ದೈವದ ಧರ್ಮನೇಮ ಮಾ.22 ಶನಿವಾರದಿಂದ ಮಾ. 23 ಭಾನುವಾರದವರೆಗೆ ನಡೆಯಲಿದೆ.
ಮಾ.22 ರಂದು ಶನಿವಾರ ಬೆಳಗ್ಗೆ 4ಗಂಟೆಗೆ ಶ್ರೀ ರಣಮಂಗಲ ಸುಬ್ರಹ್ಮಣ್ಯೇಶ್ವರ ಕ್ಷೇತ್ರದಿಂದ ದೈವಗಲ ಭಂಡಾರ ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಆಗಮಿಸಲಿದೆ. ರಾತ್ರಿ 7ಗಂಟೆಗೆ ಶ್ರೀ ಕ್ಷೇತ್ರದಲ್ಲಿ ದೈವಗಳ ತಂಬಿಲ, ರಾತ್ರಿ 8ಗಂಟೆಗೆ ಶ್ರೀ ಕ್ಷೇತ್ರದಲ್ಲಿ ಶ್ರೀ ವಿಷ್ಣುಮೂರ್ತಿ ದೇವರಿಗೆ ರಂಗಪೂಜೆ, ರಾತ್ರಿ 9ಗಂಟೆಗೆ ಶ್ರೀ ಕ್ಷೇತ್ರದಿಂದ ದೈವಗಳ ಭಂಡಾರ ಬಾಲ್ಯೊಟ್ಟು ಮನೆಗೆ ಬರಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಮಾ,23 ರಂದು ಬೆಳಗ್ಗೆ 10:30 ಕ್ಕೆ ಧರ್ಮದೈವದ ನೇಮ, ಮದ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ, ಮದ್ಯಾಹ್ನ 3ಗಂಟೆಗೆ ದೈವಗಳ ಭಂಡಾರ ನಿರ್ಗಮಿಸಲಿದೆ.
ದೈವದೇವರ ಕೃಪೆಗೆ ಪಾತ್ರರಾಗಿ, ದೈವ ಪ್ರಸಾದವನ್ನು ಸ್ವೀಕರಿಸಬೇಕಾಗಿ ಬಾಲ್ಯೊಟ್ಟು ನಮ್ಮ ಮನೆಯ ಯಜಮಾನ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.