ಪುತ್ತೂರು ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ 3 ತಿಂಗಳ ಉಚಿತ ಟೈಲರಿಂಗ್ ಕ್ಲಾಸ್ ತರಬೇತಿ ನಡೆಸಿದ್ದು ಮಾ.13 ರಂದು ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಸಂತ ಇವರು ನೆರವೇರಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಜ್ಞಾನವಿಕಾಸ ವಿಭಾಗದ ನಿರ್ದೇಶಕರಾದ ವಿಠಲ್ ಪೂಜಾರಿ ಮಾತನಾಡಿ, ತಾಯಿಯ ತ್ಯಾಗ, ಪ್ರೀತಿ, ಕರುಣೆ ಎಂದರೆ ಹೇಗೆ, ತಂದೆ ಮಕ್ಕಳಿಗೆ ತೋರಿಸುವ ಪ್ರೀತಿ ಮಮಕಾರ ಹೇಗೆ ಮಕ್ಕಳಿಗೆ ತಾವು ಕೇಳಿದಂತಹ ವಸ್ತುಗಳನ್ನು ನೇರವಾಗಿ ತೆಗೆದುಕೊಡುವ ಮೊದಲು ತಂದೆ-ತಾಯಿಯ ಪರಿಶ್ರಮದ ಬೆವರಿನ ಬಗ್ಗೆ ಅರ್ಥೈಸಬೇಕು. ತಂದೆ ತಾಯಿಯ ಪರಿಶ್ರಮ, ಕಷ್ಟಗಳನ್ನು ಅರಿತ ಮಕ್ಕಳು ಎಂದಿಗು ತಪ್ಪು ದಾರಿ ಹಿಡಿಯುವುದಿಲ್ಲ ಬದುಕು ಏನು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು. ಹಾಗೆಯೇ ಒಳ್ಳೆಯ ಶಿಕ್ಷಣವನ್ನು ಮಕ್ಕಳಿಗೆ ಕೊಡಿ ಅವರನ್ನು ಸಮಾಜದ ಒಳ್ಳೆಯ ಸತ್ಪ್ರಜೆಯನ್ನಾಗಿಸಿ ಎಂದರು. ಮಹಿಳೆಯರಿಗೆ ನೀಡಿದ ಈ ಟೈಲರಿಂಗ್ ತರಬೇತಿಯನ್ನು ಇಷ್ಟಕ್ಕೆ ಬಿಡದೆ ಜೇವನದ ಉದಕ್ಕೂ ಬಳಸಿ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಲಿ ಎಂದು ಶುಭ ಹಾರೈಸಿದರು.

ಉಚಿತ ಟೈಲರಿಂಗ್ ತರಭೇತಿಯನ್ನು ಡಿಸೆಂಬರ್ 9 ರಂದು ಉಪ್ಪಿನಂಗಡಿ ವಲಯದ ಬಜತ್ತೂರು ಎಂಬಲ್ಲಿ ಪ್ರಾರಂಭಿಸಲಾಗಿತ್ತು, ಈ ತರಭೇತಿಯಲ್ಲಿ ಸುಮಾರು 20 ಜನ ಸದಸ್ಯರು ಟೈಲರಿಂಗ್ ತರಭೇತಿಯನ್ನು ಪಡೆದುಕೊಂಡಿರುತ್ತಾರೆ ಟೈಲರಿಂಗ್ ತರಬೇತಿ ಪಡೆದುಕೊಂಡ ಸದಸ್ಯರಿಗೆ ಪ್ರಮಾಣ ಪತ್ರ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಶಶಿಧರ್ ಎಮ್, ಉಡುಪಿ ಪ್ರಾದೇಶಿಕ ವಿಭಾಗದ ಜ್ಞಾನವಿಕಾಸ ಯೋಜನಾಧಿಕಾರಿಗಳಾದ ಅಮೃತ, ಉಪ್ಪಿನಂಗಡಿ ವಲಯದ ವಲಯ ಅಧ್ಯಕ್ಷರಾದ ನಾರಾಯಣಗೌಡ, ವಲಯದ ಮೇಲ್ವಿಚಾರಕರಾದ ಶಿವಪ್ಪ, ಪಂಚಾಯತಿ ಉಪಾಧ್ಯಕ್ಷರಾದ ಉಮೇಶ್, ಒಳಾಲು ಒಕ್ಕೂಟದ ಅಧ್ಯಕ್ಷರಾದ ಮಹೇಂದ್ರವರ್ಮ, ಗ್ರಾಮೀಣ ಅಭಿವೃದ್ಧಿ ಸಲಹೆಗಾರರಾದ ವಿಲ್ಫ್ರೆಡ್ ಡಿಸೋಜಾ, ಟೈಲರಿಂಗ್ ತರಬೇತಿ ನೀಡಿದ ಶಿಕ್ಷಕರಾದ ಮಲ್ಲಿಕಾ, ಟೈಲರಿಂಗ್ ತರಬೇತಿ ಪಡೆದ ಸದಸ್ಯರು, ಸೇವಾಪ್ರತಿನಿಧಿಗಳು, ಜ್ಞಾನವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಟೈಲರಿಂಗ್ ತರಬೇತಿ ಪಡೆದ ಸುಜಾತ ಸ್ವಾಗತಿಸಿ, ಸೇವಾಪ್ರತಿನಿಧಿ ಬೇಬಿ ವಂದಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಕಾವ್ಯಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.