ಶರವೂರು : ಶ್ರೀ ದುರ್ಗಾ ಪರಮೇಶ್ವರೀ ದೇವಸ್ಥಾನದಲ್ಲಿ ಶರವೂರು ಜಾತ್ರೋತ್ಸವದ ಅಂಗವಾಗಿ ಶ್ರೀ ದೇವಿಯ ವರ್ಷಾವಧಿ ಉತ್ಸವ, ಪರಿವಾರ ದೈವಗಳಿಗೆ ಭಂಡಾರ ಹಿಡಿದು ನೇಮೋತ್ಸವ ಹಾಗೂ ಶ್ರೀ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ಪೂಜೆ ಮಾ. 14 ರಿಂದ ಮಾ. 24 ರವರೆಗೆ ನಡೆಯಲಿದೆ.
ಮಾ. 14 ರಂದು ಬೆಳಗ್ಗೆ 8 ಗಂಟೆಗೆ ಸ್ವಸ್ತಿ ಪುಣ್ಯಾಹ ವಾಚನ, ನವಕ ಪ್ರಧಾನ, ಗಣಹೋಮ, ಕಲಶಾಭಿಷೇಕ, ಗೊನೆ ಮುಹೂರ್ತ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ರಾತ್ರಿ 7 ಗಂಟೆಗೆ ಧ್ವಜಾರೋಹಣ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಮಾ. 15 ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ರಾತ್ರಿ 7 ಗಂಟೆಗೆ ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜು, ಆಲಂಕಾರು, ದ. ಕ. ಜಿ. ಪ. ಸ. ಹಿ. ಪ್ರಾ. ಶಾಲೆ, ಆಲಂಕಾರು, ಶ್ರೀ ಭಾರತೀ ಶಾಲೆ, ಆಲಂಕಾರು, ದ. ಕ.ಜಿ. ಪ. ಸ. ಹಿ. ಪ್ರಾ. ಶಾಲೆ ಪೆರಾಬೆ, ದ. ಕ. ಜಿ. ಪ. ಸ. ಹಿ. ಪ್ರಾ. ಶಾಲೆ ಕುಂತೂರು, ದ. ಕ. ಜಿ. ಪ. ಸ.ಹಿ. ಪ್ರಾ. ಶಾಲೆ ಕುಂತೂರು ಪದವು, ದ. ಕ. ಜಿ. ಪ. ಸ.ಹಿ. ಪ್ರಾ. ಶಾಲೆ ಇಡಾಳ, ದ. ಕ. ಜಿ. ಪ. ಸ.ಹಿ. ಪ್ರಾ. ಶಾಲೆ ಹಳೆನೇರೆಂಕಿ, ದ. ಕ. ಜಿ. ಪ. ಸ.ಹಿ. ಪ್ರಾ. ಶಾಲೆ, ಕುಂಡಾಜೆ ಶಾಲಾ ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳಿಂದ ಹಸಿರುವಾಣಿ ಅರ್ಪಣೆ ಜರುಗಲಿದೆ.
ಮಾ. 16 ರಂದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ 5 ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ರಾತ್ರಿ 7 ಗಂಟೆಗೆ ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಅರಸು ಉಳ್ಳಾಯ, ಮಹಿಷಾಂತಾಯ ಮತ್ತು ರಕ್ತೇಶ್ವರಿ ದೈವಗಳ ನರ್ತನೋತ್ಸವ ಜರುಗಲಿದೆ.
ಸಂಜೆ 4 ಗಂಟೆಗೆ ನೆಕ್ಕಿಲಾಡಿ, ಆಲಂಕಾರು, ಪೆರಾಬೆ, ಕುಂತೂರು, ಹಳೆನೇರೆಂಕಿ ಮತ್ತು ಗಾಣಂತಿ ಗ್ರಾಮಗಳ ಭಕ್ತಾದಿಗಳಿಂದ ಹಸಿರುವಾಣಿ ಅರ್ಪಣೆ ನೆರವೇರಲಿದೆ.
ಮಾ. 17, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ನಿತ್ಯಬಲಿ, ಪ್ರಸಾದ ವಿತರಣೆ, ಸಂಜೆ 5 ಗಂಟೆಗೆ ದೈವಗಳ ಭಂಡಾರ ತೆಗೆಯುವುದು, ಸಂಜೆ 6 ಗಂಟೆಗೆ ಉಗ್ರಾಣ ಮುಹೂರ್ತ, ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 9 ಗಂಟೆಗೆ ಧೂಮಾವತಿ, ಬಂಟ ಮತ್ತು ಕೊಡಮಣಿತ್ತಾಯ ದೈವಗಳ ನರ್ತನೋತ್ಸವ ನಡೆಯಲಿದೆ.
ಮಾ. 18 ಬೆಳಗ್ಗೆ 7 ಗಂಟೆಗೆ ಬಲಿ ಹೊರಟು ಉತ್ಸವ, ಮಧ್ಯಾಹ್ನ 12 ಗಂಟೆಯಿಂದ ಮಹಾಪೂಜೆ, ನಿತ್ಯ ಬಲಿ, ಪ್ರಸಾದ ವಿತರಣೆ, ಸಂಜೆ 6:30 ರಿಂದ ಬಲಿ ಹೊರಟು ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ನಡೆಯಲಿದೆ.
ಮಾ. 19 ಬೆಳಗ್ಗೆ 7 ಗಂಟೆಗೆ ಬಲಿ ಹೊರಟು ಉತ್ಸವ, ಮಧ್ಯಾಹ್ನ 12 ಗೆ ಮಹಾಪೂಜೆ, ನಿತ್ಯ ಬಲಿ, ಪ್ರಸಾದ ವಿತರಣೆ, ಸಂಜೆ 4:30 ರಿಂದ ಬಲಿ ಹೊರಟು ಉತ್ಸವ, ಆಲಂಕಾರು ಸಾರ್ವಜನಿಕ ಕಟ್ಟೆ ಪೂಜೆಗಳು, ಮಹಾಪೂಜೆ, ಭೂತಬಲಿ, ಪ್ರಸಾದ ವಿತರಣೆ ಜರುಗಲಿದೆ.
ಮಧ್ಯಾಹ್ನ 2:30 ಕ್ಕೆ ನಾಡ್ತಿಲ, ಕೊಂಡಾಡಿ, ಶರವೂರು, ನಗ್ರಿ, ಕೋಡ್ಲ, ಕಕ್ವೆ ಬೈಲಿನ ಭಕ್ತಾದಿಗಳಿಂದ ಮತ್ತು ದ. ಕ. ಜಿ. ಪ. ಸ. ಕಿ. ಪ್ರಾ. ಶಾಲೆ ಶರವೂರು ಶಾಲಾ ಅಧ್ಯಾಪಕ ವೃಂದ ಮತ್ತು ಮಕ್ಕಳಿಂದ ಹಸಿರುವಾಣಿ ಅರ್ಪಣೆ ನೆರವೇರಲಿದೆ.
ಬಳಿಕ ರಾತ್ರಿ 7 ರಿಂದ ಆಲಂಕಾರು ಪೇಟೆಯಲ್ಲಿ ‘ ಸಂಸಾರ ಕಲಾವಿದೆರ್ ‘ ಬಲ್ನಾಡು – ಪುತ್ತೂರು – ಇವರಿಂದ “ನಂಬಿಕೆದಾಯೆ ” ಭಕ್ತಿ ಪ್ರಧಾನ ಹಾಸ್ಯ ಸಾಮಾಜಿಕ ನಾಟಕ ನಡೆಯಲಿದೆ.
ಮಾ 20 ಬೆಳಗ್ಗೆ 7 ಗಂಟೆಗೆ ಬಲಿ ಹೊರಟು ಉತ್ಸವ, ಬೆಳಗ್ಗೆ 10 ಗಂಟೆಗೆ ಪಜ್ಜಡ್ಕ ಕುಟುಂಬಸ್ಥರು ಮತ್ತು ಬುಡೇರಿಯ ಬೈಲಿನ ಭಕ್ತಾದಿಗಳಿಂದ ಹಸಿರುವಾಣಿ ಅರ್ಪಣೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ನಿತ್ಯಬಲಿ, ಪ್ರಸಾದವಿತರಣೆ, ಸಂಜೆ 6:30 ಕ್ಕೆ ಬಲಿ ಹೊರಟು ಉತ್ಸವ, ವಸಂತಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದವಿತರಣೆ ನಡೆಯಲಿದೆ.
ಮಾ 21 ಬೆಳಗ್ಗೆ 8:30 ಕ್ಕೆ ಬಲಿ ಹೊರಟು ಉತ್ಸವ, ಮಧ್ಯಾಹ್ನ 12 ಗಂಟೆಗೆ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ, ನಿತ್ಯ ಬಲಿ, ಪ್ರಸಾದವಿತರಣೆ, ಮಧ್ಯಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ, ಸಂಜೆ 6:30 ಕ್ಕೆ ಸವಾರಿ ಮಂಟಪ ಕಟ್ಟೆ ಪೂಜೆಗಳು, ಕೆರೆ ಉತ್ಸವ, ಉತ್ಸವ, ವಸಂತ ಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಪ್ರಸಾದವಿತರಣೆ ನೆರವೇರಲಿದೆ.
ಮಾ. 22 ಬೆಳಗ್ಗೆ 6 ರಿಂದ ಬಲಿ ಹೊರಟು ಉತ್ಸವ, ಬೆಳಗ್ಗೆ 10 ಗಂಟೆಗೆ ಆಶ್ಲೇಷ ಬಲಿ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ನಿತ್ಯ ಬಲಿ, ಪ್ರಸಾದ ವಿತರಣೆ ಜರುಗಲಿದೆ.
ರಾತ್ರಿ 9 ಗಂಟೆಗೆ ಶ್ರೀ ಮಹಾರಥೋತ್ಸವ ನಡೆಯಲಿದೆ.
ಮಾ. 23 ಬೆಳಗ್ಗೆ 8 ಗಂಟೆಗೆ ಕವಾಟೋದ್ಘಾಟನೆ, ಪ್ರಸನ್ನ ಪೂಜೆ, ಶಯನ ಪ್ರಸಾದ ವಿತರಣೆ, ಬೆಳಗ್ಗೆ 10 ರಿಂದ ಯಾತ್ರಾ ಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದವಿತರಣೆ, ಸಂಜೆ 5 ರಿಂದ ಅವbhrತ ಮೆರವಣಿಗೆ, ಕಟ್ಟೆ ಪೂಜೆಗಳು, ಸನತ ಮೊಗರು, ಕುಮಾರಧಾರೆಯಲ್ಲಿ ಅವಬ್ರುತ, ಧ್ವಜಾರೋಹಣ ನೆರವೇರಲಿದೆ.
ಮಧ್ಯಾಹ್ನ 3:30 ರಿಂದ 5:30 ರವರೆಗೆ ಸೌಪರ್ಣಿಕ ಮ್ಯೂಸಿಕ್ಸ್, ಕಡಬ – ಇವರಿಂದ ” ಭಕ್ತಿ ರಸಮಂಜರಿ ಕಾರ್ಯಕ್ರಮ ” ನಡೆಯಲಿದೆ.
ಮಾ. 24 ಬೆಳಗ್ಗೆ 9 ರಿಂದ ಶರವೂರು ಶ್ರೀ ಸುಬ್ರಹ್ಮಣ್ಯ ರಾವ್ ಮತ್ತು ಮನೆಯವರು – ಇವರಿಂದ ಭದ್ರಕಾಳಿ ಅಮ್ಮನವರ ಗುಡಿಯಲ್ಲಿ ವಿಶೇಷ ಪೂಜೆ ಶಿರಾಡಿ ಮತ್ತು ಗುಳಿಗ ದೈವಗಳ ನೇಮ ಹಾಗೂ ಮಧ್ಯಾಹ್ನ 12 ಗಂಟೆಗೆ ಅಯ್ಯಪ್ಪ ಭಕ್ತವೃಂದ ಶರವೂರು, ಅಲಂಕಾರು ಮತ್ತು ರಾಮಕುಂಜ – ಇವರಿಂದ ಗಂಜಿ ಊಟ ಸೇವೆ ನಡೆಯಲಿದೆ.