ಮಂಗಳೂರು : ಪ್ಯಾರಾಮೆಡಿಕಲ್ ವಿದ್ಯಾರ್ಥಿ ನಿತೇಶ್ ಬೆಳ್ಚಾಡ ಸುಮಾರು ದಿನಗಳಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದ.
ಮೂಡುಪೆರಾರ ನಿವಾಸಿ ನಿತೇಶ್ ಗೋವಾದಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಫೆಬ್ರವರಿ 13 ಕ್ಕೆ ನಾಪತ್ತೆಯಾಗಿದ್ದ ಈತನ ಸುಳಿವಿಗೆ ಪೊಲೀಸರು ವಿಶೇಷ ತಂಡ ರಚಿಸಿ ಅನೇಕ ಕಡೆ ತನಿಖೆ ನಡೆಸಿದ್ದರು ಮಾಹಿತಿ ಲಭಿಸಿರಲಿಲ್ಲ. ಆದರೆ ನಿತೇಶ್ ಎಂಬವನು ಗೋವಾದಲ್ಲಿ ಸಿಕ್ಕಿದ್ದಾನೆ ಎನ್ನಲಾಗಿದೆ.