ಇನ್ನು ದೇವಳಗಳ ರೂಮ್‌ ಮಾಹಿತಿ ವೆಬ್‌ಸೈಟಿನಲ್ಲಿ ಲಭ್ಯ

ಭಕ್ತರ ಅನುಕೂಲಕ್ಕಾಗಿ 400 ದೇವಸ್ಥಾನ, ಛತ್ರಗಳ ಮಾಹಿತಿ ಅಪ್‌ಲೋಡ್‌

ಬೆಂಗಳೂರು: ಮುಜರಾಯಿ ಇಲಾಖೆ ಅಧೀನದಲ್ಲಿರುವ ರಾಜ್ಯದ ದೇವಾಲಯಗಳು ಮತ್ತು ಹೊರರಾಜ್ಯಗಳ ಛತ್ರಗಳಲ್ಲಿ ಲಭ್ಯವಿರುವ ಕೊಠಡಿಗಳ ಮಾಹಿತಿ ಇನ್ನು ವೆಬ್‌ಸೈಟಿನಲ್ಲಿ ಸಿಗಲಿದೆ. ಹಬ್ಬ, ಹರಿದಿನಗಳಂದು ಜನ ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಿಗೆ ತೆರಳುತ್ತಾರೆ.

ಈ ವೇಳೆ ದೇವಸ್ಥಾನ ಪರಿಸರದಲ್ಲಿ ಉಳಿದುಕೊಳ್ಳಲು ಕೊಠಡಿ ಸಿಗುವುದಿಲ್ಲ. ಈ ಸಮಸ್ಯೆ ಬಗೆಹರಿಸಲು ವೆಬ್‌ಸೈಟ್‌ನಲ್ಲಿ ಕೊಠಡಿಗಳ ಮಾಹಿತಿ ನೀಡಲು ಮುಜರಾಯಿ ಇಲಾಖೆ ನಿರ್ಧರಿಸಿದೆ.
ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಜರಾಯಿ ಹಾಗೂ ಧಾರ್ಮಿಕ ಧತ್ತಿ ಇಲಾಖೆಗೆ ಸಂಬಂಧಿಸಿದಂತೆ ಕರ್ನಾಟಕ ದೇವಾಲಯಗಳ ವಸತಿ ಕೋಶವನ್ನು ನೀಡುವುದಾಗಿ ಘೋಷಿಸಿದ್ದರು. ಈ ಕೋಶದಂತೆ ವೆಬ್‌ಸೈಟ್‌ನಲ್ಲಿ ರಾಜ್ಯದ 400 ದೇವಾಲಯದ ಹಾಗೂ ಹೊರರಾಜ್ಯದ ಛತ್ರಗಳ ಅಂದಾಜು 3,500 ರೂಮ್‌ಗಳ ಬುಕ್ಕಿಂಗ್ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ.

 
 

ಕರ್ನಾಟಕ ಟೆಂಪಲ್ಸ್ ಅಕಾಮಡೇಷನ್ ಡಾಟ್‌ಕಾಮ್ (https://karnatakatemplesaccommodation.com) ವೆಬ್‌ಸೈಟ್‌ನಲ್ಲಿ ದೇವಾಲಯದ ರೂಮ್‌ಗಳನ್ನು ಬುಕ್ ಮಾಡಬಹುದಾಗಿದೆ. ಈ ವೆಬ್‌ಸೈಟ್ ಕ್ಲಿಕ್ ಮಾಡಿದರೆ ದೇವಾಲಯದ ರೂಮ್‌ಗಳ ಮಾಹಿತಿ ದೊರೆಯಲಿದೆ. ಈಗಾಗಲೇ ಈ ವೆಬ್‌ಸೈಟ್‌ನಲ್ಲಿ ಕೆಲ ದೇವಾಲಯಗಳ ರೂಮ್‌ಗಳ ಮಾಹಿತಿ ಲಭ್ಯವಿದೆ. ಕೇವಲ ರಾಜ್ಯ ಮಾತ್ರವಲ್ಲ ಹೊರರಾಜ್ಯಗಳಾದ ತಿರುಪತಿ, ಶ್ರೀಶೈಲ, ಮಂತ್ರಾಲಯ ಸೇರಿದಂತೆ ರಾಜ್ಯದ ಮುಜರಾಯಿ ಛತ್ರಗಳಿರುವ ಕಡೆ ಬುಕ್ ಮಾಡಬಹುದಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top