ಪುತ್ತೂರು: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2023-24 ರ ಸಾಲಿನ ಪದವಿ ಪರೀಕ್ಷೆಗಳಲ್ಲಿ ವಿವೇಕಾನಂದ ಪದವಿ ಕಾಲೇಜಿಗೆ ಐದು ರ್‍ಯಾಂಕ್‌ಗಳು ಲಭಿಸಿದೆ.
ಬಿಕಾಂ ನ ಸ್ವಾತಿ ಎಸ್. ಭಟ್ 4150 ರಲ್ಲಿ 3984 ಅಂಕ ಪಡೆದು ಮೂರನೇ ರ್‍ಯಾಂಕನ್ನು ಗಳಿಸಿದ್ದಾರೆ. ಇವರು ಪುತ್ತೂರಿನ ಕಲ್ಲಾರೆ ನಿವಾಸಿ ಶಿವಶಂಕರ ಭಟ್ ಎಸ್. ಹಾಗೂ ಉಷಾ ಎಸ್. ಭಟ್ ದಂಪತಿ ಪುತ್ರಿ. ಬಿಕಾಂ ನ ಇನ್ನೋರ್ವ ವಿದ್ಯಾರ್ಥಿ ಪವನ್ ರಾಜ್ 3969 ಅಂಕಗಳನ್ನು ಪಡೆದು 9ನೇ ನೇ ರ್‍ಯಾಂಕ್ ಗಳಿಸಿದ್ದಾರೆ. ಇವರು ಮಂಜೇಶ್ವರದ ರಘು ಹಾಗೂ ಸುನೀತಾ ದಂಪತಿ ಪುತ್ರ.
ಬಿಎಸ್ಸಿ ಯ ಎಂಸಿಎಸ್ ವಿಭಾಗದ ಭವಿಷ್ ಕುಮಾರ್ 4019 ಅಂಕ ಗಳಿಸಿ 5ನೇ ರ್‍ಯಾಂಕ್ ಗಳಿಸಿದ್ದಾರೆ. ಇವರು ಪುತ್ತೂರಿನ ಶಾಂತಿಗೋಡು ನಿವಾಸಿ ರಮೇಶ್ ಗೌಡ ಹಾಗೂ ವಾರಿಜ ದಂಪತಿ ಪುತ್ರ. ಬಿಎಸ್ಸಿ ಪರೀಕ್ಷೆಯಲ್ಲಿ ಎಂಸಿ ವಿಭಾಗದಲ್ಲಿ ಅನನ್ಯಾ ಡಿ 3985 ಅಂಕಗಳನ್ನು ಪಡೆದು 8ನೇ ರ್‍ಯಾಂಕ್ ಪಡೆದಿದ್ದಾರೆ. ಇವರು ಬಂಟ್ವಾಳದ ದಾಸಕೋಡಿಯ ಧನಂಜಯ ಡಿ. ಹಾಗೂ ಪಲ್ಲವಿ ದಂಪತಿ ಪುತ್ರಿ.
ಕಲಾ ವಿಭಾಗದ ಪರೀಕ್ಷೆಯಲ್ಲಿ ಎಚ್ ಎಸ್ ವಿಭಾಗದಲ್ಲಿ ಶೋಭಾದೇವಿ 4550 ರಲ್ಲಿ 4130 ಅಂಕ ಪಡೆದುಕೊಂಡು 10ನೇ ರ್‍ಯಾಂಕ್ ಗಳಿಸಿಕೊಂಡಿದ್ದಾರೆ. ಇವರು ಬೆಳ್ತಂಗಡಿಯ ನಿಡ್ಡಾಜೆ ನಿವಾಸಿ ಸುಬ್ರಹ್ಮಣ್ಯ ಭಟ್ ಹಾಗೂ ಕಾವೇರಿ ದಂಪತಿ ಪುತ್ರಿ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.