ಉಪ್ಪಿನಂಗಡಿ : ಯಕ್ಷಗಾನದಲ್ಲಿ ಹಿಮ್ಮೇಳ ವಾದಕರಾಗಿ ಮತ್ತು ಅರ್ಥಧಾರಿಗಳಾಗಿ ಕೀರ್ತಿ ಶೇಷ ರಾಗಿರುವ ಕೆ. ಗಣಪತಿ ಆಚಾರ್ಯ ಹಳೆ ನೇರೆಂಕಿ , ಕೆ ವಿಠಲ ಆಚಾರ್ಯ ನೆಲ್ಯಾಡಿ ಮತ್ತು ಭಾಸ್ಕರ ಆಚಾರ್ಯ ಉಪ್ಪಿನಂಗಡಿ ಸಹೋದರರ ಐದನೇ ವರ್ಷದ ಸಂಸ್ಮರಣ ಕಾರ್ಯಕ್ರಮವು ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ಸಹಯೋಗದಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.
ಹರೀಶ ಆಚಾರ್ಯ ಬಾರ್ಯ ಕಲಾವಿದ ಸಹೋದರರ ಸಂಸ್ಮರಣೆ ಮಾಡಿದರು. ಸಂಸ್ಮರಣೆಯಂಗವಾಗಿ ನಿವೃತ್ತ ಶಿಕ್ಷಕ,ಅರ್ಥಧಾರಿ ಗೋಪಾಲಶೆಟ್ಟಿ ಕಳೆಂಜ ಅವರನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಳಿಕಾಂಬ ಯಕ್ಷಗಾನ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮಾತನಾಡಿ ಕಲಾವಿದರ ಸಂಸ್ಮರಣೆ, ಮತ್ತು ಕಲಾವಿದರನ್ನು ಗೌರವಿಸುವುದರೊಂದಿಗೆ ಈ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಔಚಿತ್ಯಪೂರ್ಣವೆಂದರು.

ವೇದಿಕೆಯಲ್ಲಿ ನಿವೃತ್ತ ತಹಶೀಲ್ದಾರ್ ರಾಘವೇಂದ್ರ ಆಚಾರ್ಯ ಬಾರ್ಯ, ಕಲಾವಿದ ಅಂಬಾ ಪ್ರಸಾದ್ ಪಾತಾಳ, ಧಾರ್ಮಿಕ ದತ್ತಿ ಇಲಾಖೆಯ ಪರಿವೀಕ್ಷಕ ಶ್ರೀಧರ ಎಸ್ ಪಿ ಸುರತ್ಕಲ್, ಗಂಗಾಧರ ಆಚಾರ್ಯ ನೇರೆಂಕಿ, ಬಲ್ಯ ವಿನಾಯಕ ಯಕ್ಷಗಾನ ಸಂಘದ ಅಧ್ಯಕ್ಷ ಜಯರಾಮ ನಾಲ್ಗುತ್ತು, ಪುರುಷೋತ್ತಮ ಆಚಾರ್ಯ ಹಳೆನೇರೆಂಕಿ, ಗಂಗಾಧರ ಆಚಾರ್ಯ ಪುತ್ತೂರು, ಪುರುಷೋತ್ತಮ ಆಚಾರ್ಯ ಕಡಬ ಉಪಸ್ಥಿತರಿದ್ದರು.
ಬಳಿಕ ಶ್ರೀ ಮಹಾಭಾರತ ಸರಣಿಯಲ್ಲಿ 67ನೇ ಕಾರ್ಯಕ್ರಮವಾಗಿ ಜ್ವಾಲಾ ಶಪಥ ತಾಳಮದ್ದಳೆ ಜರಗಿತು. ಪ್ರಾಯೋಜಕರಾಗಿ ಹರೀಶ ಆಚಾರ್ಯ ಬಾರ್ಯ ಮತ್ತು ಪುರುಷೋತ್ತಮ ಆಚಾರ್ಯ ಕಡಬ ಸಹಕರಿಸಿದರು. ಹರೀಶ್ ಬಾರ್ಯ ಕಾರ್ಯಕ್ರಮ ನಿರೂಪಿಸಿ ಮುರಳಿಧರ ಆಚಾರ್ಯ ನೇರೆಂಕಿ ವಂದಿಸಿದರು.
ಭಾಗವತರಾಗಿ ಪದ್ಮನಾಭ ಕುಲಾಲ್ ಇಲಂತಿಲ, ನಿತೇಶ್ ಕುಮಾರ್.ವೈ, ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ,ಸುರೇಶ್ ರಾವ್ ಬನ್ನೆಂಗಳ ಹಿಮ್ಮೇಳದಲ್ಲಿ ಮುರಳಿದರ ಆಚಾರ್ಯ ಹಳೆನೇರಂಕಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಸಂಜಯ ಕಡಬ
ಅರ್ಥಧಾರಿಗಳಾಗಿ ಮಹಾಲಿಂಗೇಶ್ವರ ಭಟ್ ಪೆರಿಯಡ್ಕ( ಅರ್ಜುನ), ಅಂಬಾ ಪ್ರಸಾದ ಪಾತಾಳ( ಪ್ರವೀರ), ದಿವಾಕರ ಆಚಾರ್ಯ ಗೇರುಕಟ್ಟೆ (ಜ್ವಾಲೆ), ರವೀಂದ್ರ ದರ್ಬೆ(ವೃಷ ಕೇತು), ಜಯರಾಮಗೌಡ ನಾಲ್ಗುತ್ತು(ಮದನಮಂಜರಿ ಮತ್ತು ಅಂಬಿಗ), ಶ್ರೀಧರ ಎಸ್ ಪಿ ಸುರತ್ಕಲ್ (ನೀಲದ್ವಜ) ಹರೀಶ ಆಚಾರ್ಯ ಬಾರ್ಯ(ಅಗ್ನಿ), ಶೃತಿ ವಿಸ್ಮಿತ್ (ಗಂಗೆ) ಭಾಗವಹಿಸಿದ್ದರು.