ಕುದ್ಮಾರು : ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಮಾ. 9 ಭಾನುವಾರದಂದು ಕುದ್ಮಾರು ಗ್ರಾಮದ ಅನ್ಯಾಡಿಯಲ್ಲಿ ಕಟ್ಟತ್ತಾರು ಕಟ್ಟೆ ಯಲ್ಲಿ ನಡೆಯಿತು.
ನೇಮೋತ್ಸವದ ಅಂಗವಾಗಿ ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, ಸಂಜೆ 7 ಗಂಟೆಗೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ದೈವಸ್ಥಾನ ಅನ್ಯಾಡಿಯ ಗ್ರಾಮ ಚಾವಡಿಯಿಂದ ದೈವದ ಭಂಡಾರ ತೆಗೆಯಲಾಯಿತು.. ರಾತ್ರಿ 8:30 ಕ್ಕೆ ದೈವಕ್ಕೆ ಎಣ್ಣೆ ಬೂಳ್ಯ ನೀಡಲಾಯಿತು. ರಾತ್ರಿ 9 ಗಂಟೆಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ 10 ಗಂಟೆಗೆ ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವದ ಹಾಗೂ ಸಪರಿವಾರ ದೈವಗಳ ನೇಮೋತ್ಸವ ನಡೆಯಿತು. ಹಾಗೂ ಎಲ್ಲಾ ಗ್ರಾಮಸ್ಥರಿಗೆ ಸಿರಿಮುಡಿ ಗಂಧಪ್ರಸಾದ ವಿತರಣೆ, ರಾತ್ರಿ 1:30 ಕ್ಕೆ ಚಾಪಲ್ಲ ಗಡಿಗೆ ಮಾರಿ ಹೋಗುವುದು ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷರು ಸತೀಶ್ ಕುಮಾರ್ ಕೆಡೆಂಜಿ, ಗೌರವಾಧ್ಯಕ್ಷರು ಕೆ. ಸೀತಾರಾಮ ರೈ ಸವಣೂರು, ಉಪಾಧ್ಯಕ್ಷರಾದ ಎ. ಆನಂದ ಅನ್ಯಾಡಿ, ಚೆನ್ನಪ್ಪ ಗೌಡ ನೂಜಿ ದರ್ಖಾಸ್ತು, ದೇವಪ್ಪ ಗೌಡ ನಡುಮನೆ, ಐತಪ್ಪ ಗೌಡ ಕುವೆತ್ತೋಡಿ, ಲೋಹಿತಾಕ್ಷ ಕೆಡೆಂಜಿಕಟ್ಟ, ಪ್ರಧಾನ ಕಾರ್ಯದರ್ಶಿ ನಾಗೇಶ್ ಕೆ. ಕೆಡೆಂಜಿ, ಜೊತೆಕಾರ್ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ, ಕುಶಾಲಪ್ಪ ಗೌಡ ಕಾರ್ಲಾಡಿ, ಕೋಶಾಧಿಕಾರಿ ಉಮೇಶ್ ಕೆರೆನಾರು, ಶ್ರೀ ಶಿರಾಡಿ ರಾಜನ್‍ದೈವ ಅನ್ಯಾಡಿ ಕುದ್ಮಾರು ಆಡಳಿತ ಮಂಡಳಿ ಅಧ್ಯಕ್ಷ ಯೋಗೀಶ್ ಕೆ.ಕೆಡೆಂಜಿ, ಆಡಳಿತ ಮಂಡಳಿ ಅನ್ಯಾಡಿ ಬಾರಿಕೆ ಕುಟುಂಬ ಮತ್ತು ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಅನ್ಯಾಡಿ ಬಾರಿಕೆ, ಹಾಗೂ ಅನ್ಯಾಡಿ ಬಾರಿಕೆ ಕುಟುಂಬದ ಹಿರಿಯರಾದ ಪದ್ಮಯ್ಯ ಗೌಡ ಅನ್ಯಾಡಿ, ಮೋನಪ್ಪ ಗೌಡ ಅನ್ಯಾಡಿ, ಪದ್ಮಯ್ಯ ಗೌಡ ಕೆಡೆಂಜಿ, ದೇವಣ್ಣ ಗೌಡ ಅನ್ಯಾಡಿ ಉಪಸ್ಥಿತರಿದ್ದರು.