ಪುತ್ತೂರು: ಪುತ್ತೂರು: ಇನ್ ಸ್ಟಾಗ್ರಾಂನಲ್ಲಿ ಬಂದ ಜಾಹೀರಾತಿಗೆ ಮಾರು ಹೋಗಿ ಟ್ರೇಡಿಂಗ್ ಇನ್‌ವೆಸ್ಟೆಂಟ್ ಮಾಡಲು ಹೋಗಿ ಬನ್ನೂರು ನಿವಾಸಿ ಯುವತಿಯೋರ್ವರು 4.90 ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ಮಾ.1 ರಂದು ಇನ್ ಸ್ಟಾಗ್ರಾಂನಲ್ಲಿ ನಲ್ಲಿ ಹೂಡಿಕೆ ಮಾಡಿದರೆ ಲಾಭಾಂಶ ಸಿಗುವ ಬಗ್ಗೆ ಬಂದ , ໖) Instagram d Investment TASK 2 UPI ID ರೂ.10,000 ಕಳುಹಿಸಲು ತಿಳಿಸಿದ್ದಕ್ಕೆ ಫೋನ್ ಪೇ ಮೂಲಕ ಕಳುಹಿಸಿರುತ್ತಾರೆ.
ಇನ್ ವೆಸ್ಟ್ ಮೆಂಟ್ ಟ್ರೇಡಿಂಗ್ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಗಾಗಿ ನೀಡಿದ್ದ ಮೊಬೈಲ್ ನಂಬ್ರಕ್ಕೆ ವಾಟ್ಸಪ್ ಮುಖಾಂತರ ಮೆಸೇಜ್ ಮಾಡಿದ್ದು, ಈ ಬಗ್ಗೆ ಇನ್ ವೆಸ್ಟ್ ಮೆಂಟ್ ಟ್ರೇಡಿಂಗ್ ಗೆ10,000 ಹಾಕಿದರೆ ಎರಡು ಲಕ್ಷ ಗಳಿಸಬಹುದು ಎಂದು ತಿಳಿಸಿದ್ದಕ್ಕೆ ಹಣ ಹಾಕಿದ್ದಾರೆ. ಬಳಿಕ ಹಂತ ಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ವಿವಿಧ – ಬ್ಯಾಂಕ್ ಖಾತೆಗಳಿಗೆ 4,90,997 ರೂ.ವರ್ಗಾವಣೆ ಮಾಡಿದ್ದು, ನಂತರ ಯುವತಿಯ ಬ್ಯಾಂಕ್ ಖಾತೆಗೆ ಯಾವುದೇ ಹಣ ವಾಪಾಸ್ ಹಾಕದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಯುವತಿ ನೀಡಿದ ದೂರಿನಂತೆ ಮಂಗಳೂರು ಸಿಇಎನ್ ಅಪರಾಧ ಪೊಲೀಸು ಠಾಣೆಯಲ್ಲಿ ಅ.ಕ್ರ13/2025 ಕಲಂ: 66(ಆ) ITAct ಮತ್ತು ಕಲಂ: 318(2), 318(4) BNS Act. ನಂತೆ ಪ್ರಕರಣ ದಾಖಲಾಗಿದೆ.