ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತ್ರತ್ವದ ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ ಗ್ರಾಮ ಸಾಹಿತ್ಯ ಸಂಭ್ರಮದ ಸಂಚಾಲಕ, ಯುವಕವಿ ನಾರಾಯಣ ಕುಂಬ್ರ ಅವರ “ಹನಿದನಿ : ಇದು ಬರಹಗಳ ಮಣಿ.”ಎಂಬ ಕೃತಿ ಬಿಡುಗಡೆಗೊಂಡಿತು.
ಸುದಾನ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ವಿಜಯ ಹಾರ್ವಿನ್ ಕೃತಿ ಬಿಡುಗಡೆ ಮಾಡಿದರು.
ಪುತ್ತೂರು ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಅವರ ಆಶೀರ್ವಾದದೊಂದಿಗೆ, ಪುತ್ತೂರು ತಾಲೂಕು ಘಟಕದ ಕ.ಸಾ.ಪರಿಷತ್ತಿನ ಅಧ್ಯಕ್ಷರು ಪುತ್ತೂರು ಉಮೇಶ್ ನಾಯಕ್ ಅವರ ಅಧ್ಯಕ್ಷತೆಯಲ್ಲಿ, ಪುತ್ತೂರು ಅನುರಾಗ ವಠಾರದ ನಡೆದ ಸಮಾರಂಭದಲ್ಲಿ ಕಾರ್ಯಕ್ರಮ ನಡೆಯಿತು.