ಕೇಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ ) ವಿಟ್ಲ ತಾಲೂಕಿನ ಕೇಪು ವಲಯದ ಕೇಪು ಕಾರ್ಯಕ್ಷೇತ್ರದ ಕಲ್ಲಂಗಳ ಶಾಲೆಯಲ್ಲಿ 3 ತಿಂಗಳ ಟ್ಯೂಷನ್ ಕ್ಲಾಸ್ ಆಯೋಜಿಸಿದ್ದು ಇದರ ಸಮಾರೋಪ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಪು ಒಕ್ಕೂಟ ಅಧ್ಯಕ್ಷ ವೆಂಕಪ್ಪರವರು ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿಣಿ ಮಾಲತಿ ಯೋಜನೆಯ ಮುಖಾಂತರ ನಡೆಯುವ ಕಾರ್ಯಕ್ರಮಗಳ ಬಗ್ಗೆ ಖುಷಿಯನ್ನು ವ್ಯಕ್ತಪಡಿಸಿದರು. ಪೂರ್ವ ತಯಾರಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಇದ್ದು ಇನ್ನು ಮುಂದೆಯು ಇಂತಹ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.
ಅಳಿಕೆ ಶಾಲೆಯ ಪ್ರಾಂಶುಪಾಲ ಹಾಗೂ ಕೇಂದ್ರದ ಸದಸ್ಯರು, ಜ್ಞಾನವಿಕಾಸ ಸಮನ್ವಯಧಿಕಾರಿ ದೀಪಾ , ಸೇವಾ ಪ್ರತಿನಿಧಿ ಜ್ಯೋತಿ , ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.