ಎನೆಕಲ್ಲು : ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ , ಆಂತರಿಕ ಗುಣಮಟ್ಟ ಭರವಸಾ ಕೋಶ ಸಮಾಜಶಾಸ್ತ್ರ ವಿಭಾಗದ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎನೆಕಲ್ಲು ಇಲ್ಲಿ ಆಟದಿಂದ ಪಾಠ ಎಂಬ ವಿಸ್ತರಣಾ ಕಾರ್ಯಕ್ರಮ ಮಾ.8 (ಇಂದು) ರಂದು ನಡೆಯಿತು.
ಸಮಾಜಶಾಸ್ತ್ರ ವಿಭಾಗದ ತೃತೀಯ ಪದವಿಯ ವಿದ್ಯಾರ್ಥಿಗಳು, ಶಾಲಾ ಮಕ್ಕಳಿಗೆ ವಿವಿಧ ರೀತಿಯ ಆಟಗಳನ್ನು ಹಮ್ಮಿಕೊಂಡು ಆ ಮೂಲಕ ಪಾಠವನ್ನು ಕಲಿಸಿದರು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಸಮಯ ಪರಿಪಾಲನೆ, ಕೌಶಲ್ಯವನ್ನು ಹೆಚ್ಚಿಸುವ ಆಟಗಳನ್ನು ಆಡಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಚಂದ್ರಿಕಾ, ಅಧ್ಯಾಪಕವೃಂದ, ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಭರತ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮನೋಹರ, ಉಪನ್ಯಾಸಕಿ ಆರತಿ, ಸಮಾಜಶಾಸ್ತ್ರ ವಿಭಾಗದ ಒಟ್ಟು 24 ಮಕ್ಕಳು ಭಾಗವಹಿಸಿದರು.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಶ್ರೇಯಾ ಕೆ. ವಂದಿಸಿ, ಸ್ವಾತಿ ಡಿ. ಜಿ. ವಂದಿಸಿ, ಕವನ ನಿರೂಪಿಸಿದರು.