ಅನಂತಾಡಿ: ಇತಿಹಾಸ ಪ್ರಸಿದ್ದ ಅನಂತಾಡಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ಮಾರ್ಚ್ 14 ನೇ ಶುಕ್ರವಾರದಂದು ನಡೆಯಲಿದೆ. ಜಾತ್ರೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮ ನಿನ್ನೆ ನಡೆಯಿತು.
ಬಳಿಕ ಶ್ರೀ ಉಳ್ಳಾಲ್ತಿ ಅಮ್ಮನವರಿಗೆ ಪೂಜಾ ವಿಧಿ ವಿಧಾನಗಳು ನಡೆಯಿತು.
ಮಾ.13 ಗುರುವಾರ ರಾತ್ರಿ ಭಂಡಾರವೇರಿ ಮಾ. 14 ಶುಕ್ರವಾರ ಬೆಳಗ್ಗೆ 9 ಗಂಟೆಯಿಂದ ಮೆಚ್ಚಿ ಜಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ನರೇಂದ್ರ ರೈ ನೇಳ್ಕೊಟ್ಟು ಮನೆ, ಅನಂತಾಡಿ ದೊಡ್ಡ ಮನೆತನದವರು ಮತ್ತು ಗ್ರಾಮಸ್ಥರು ಭಾಗಿಯಾಗಲಿದ್ದಾರೆ.